ಮಾಜಿ ಚಾಂಪಿಯನ್ ಕೆರ್ಬರ್ಗೆ ಬೆನ್ನುನೋವು ಆಸ್ಟ್ರೇಲಿಯನ್ ಓಪನ್ಗೆ ಅನುಮಾನ
ಮೆಲ್ಬೋರ್ನ್, ಜ.15: ವರ್ಷದ ಮೊದಲ ಗ್ರಾನ್ಸ್ಲಾಮ್ ಟೂರ್ನಿ ಆರಂಭವಾಗಲು ದಿನಗಣನೆ ಆರಂಭವಾಗಿರುವಾಗ ಆಸ್ಟ್ರೇಲಿಯನ್ ಓಪನ್ನ ಮಾಜಿ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್ ಬೆನ್ನುನೋವಿಗೆ ತುತ್ತಾಗಿದ್ದಾರೆ. ಬುಧವಾರ ನಡೆದ ಅಡಿಲೇಡ್ ಇಂಟರ್ನ್ಯಾಶನಲ್ ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಜರ್ಮನಿಯ ಆಟಗಾರ್ತಿ ಗಾಯದ ಸಮಸ್ಯೆಯಿಂದಾಗಿ ನಿವೃತ್ತಿಯಾದರು. ವಿಶ್ವದ ಮಾಜಿ ನಂ.1 ಆಟಗಾರ್ತಿ ಕೆರ್ಬರ್ ಎರಡನೇ ಸುತ್ತಿನ ಪಂದ್ಯದಲ್ಲಿ ದಯಾನಾ ಯಾಸ್ಟ್ರಿಂಸ್ಕ ವಿರುದ್ಧ 6-3, 2-0 ಮುನ್ನಡೆಯಲ್ಲಿದ್ದಾಗ ಸ್ಪರ್ಧೆಯಿಂದ ಹಿಂದೆ ಸರಿದರು. 2016ರಲ್ಲಿ ಮೆಲ್ಬೋರ್ನ್ ಪಾರ್ಕ್ನಲ್ಲಿ ಸೆರೆನಾ ವಿಲಿಯಮ್ಸ್ಗೆ ಶಾಕ್ ನೀಡಿ ಪ್ರಶಸ್ತಿ ಜಯಿಸಿದ್ದ ಕೆರ್ಬರ್ ಈ ತಿಂಗಳಾರಂಭದಲ್ಲಿ ನಡೆದಿದ್ದ ಬ್ರಿಸ್ಬೇನ್ ಇಂಟರ್ನ್ಯಾಶನಲ್ನ ಮೊದಲ ಸುತ್ತಿನ ಪಂದ್ಯದಲ್ಲೇ ಸೋತಿದ್ದರು.
Next Story