ಅಂಡರ್-19 ಕ್ರಿಕೆಟ್ ವಿಶ್ವಕಪ್: ಭಾರತ ಶುಭಾರಂಭ
ಬ್ಲೋಮ್ಫೋಂಟೇನ್,ಜ.19: ಆಲ್ರೌಂಡ್ ಪ್ರದರ್ಶನ ನೀಡಿದ ಹಾಲಿ ಚಾಂಪಿಯನ್ ಭಾರತ ಅಂಡರ್-19 ವಿಶ್ವಕಪ್ನಲ್ಲಿ ಶ್ರೀಲಂಕಾ ವಿರುದ್ಧ 90 ರನ್ನಿಂದ ಜಯ ಸಾಧಿಸಿ ಶುಭಾರಂಭ ಮಾಡಿದೆ.
ವಿಶ್ವಕಪ್ನಲ್ಲಿ ರವಿವಾರ ಆಡಿದ ತನ್ನ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ಗಳ ನಷ್ಟಕ್ಕೆ 297ರನ್ ಗಳಿಸಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(59,74 ಎಸೆತ), ನಾಯಕ ಪ್ರಿಯಂ ಗರ್ಗ್(56,72 ಎಸೆತ), ಉಪ ನಾಯಕ ಧ್ರುವ್ ಜುರೆಲ್(52, 48 ಎಸೆತ) ಹಾಗೂ ಆಲ್ರೌಂಡರ್ ಸಿದ್ದೇಶ್ ವೀರ್(44, 27 ಎಸೆತ, 2-34)ಕೊಡುಗೆ ನೆರವಿನಿಂದ ಭಾರತ 300ರ ಗಡಿ ತಲುಪಿತು.
ಗೆಲ್ಲಲು ಕಠಿಣ ಗುರಿ ಪಡೆದ ಲಂಕಾವನ್ನು ಭಾರತ 45.2 ಓವರ್ಗಳಲ್ಲಿ 207 ರನ್ಗೆ ನಿಯಂತ್ರಿಸಿತು.ಲೆಗ್ಸ್ಪಿನ್ನರ್ ರವಿ(2-44) ಹಾಗೂ ಎಡಗೈ ವೇಗಿ ಆಕಾಶ್ ಸಿಂಗ್(2-29)ತಲಾ ಎರಡು ವಿಕೆಟ್ ಪಡೆದರು. ನಾಯಕ ನಿರುನ್ ಧನಂಜಯ(50) ಸರ್ವಾಧಿಕ ಸ್ಕೋರ್ ಗಳಿಸಿದರು.
Next Story