ಆಸ್ಟ್ರೇಲಿಯನ್ ಓಪನ್ : ಕ್ವಾರ್ಟರ್ ಫೈನಲ್ಗೆ ನಡಾಲ್
ಮೆಲ್ಬೋರ್ನ್, ಜ.25: ಅಗ್ರ ಶ್ರೇಯಾಂಕದ ರಫೆಲ್ ನಡಾಲ್ ತಮ್ಮದೇ ದೇಶದ ಪಾಬ್ಲೊ ಕರ್ರೆನೊ ಬುಸ್ಟಾ ವಿರುದ್ಧ ಜಯ ಸಾಧಿಸಿ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಮೆಂಟ್ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿದ್ದಾರೆ.
ಇಲ್ಲಿನ ರಾಡ್ ಲಾವೆರ್ ಅರೆನಾದಲ್ಲಿ ಶನಿವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನಡಾಲ್ 27ನೇ ಶ್ರೇಯಾಂಕದ ಕರ್ರೆನೊ ಬುಸ್ಟಾರನ್ನು 6-1, 6-2, 6-4 ಸೆಟ್ಗಳ ಅಂತರದಿಂದ ಮಣಿಸಿದ್ದಾರೆ. ಮೆಲ್ಬೋರ್ನ್ ಪಾರ್ಕ್ನಲ್ಲಿ 13ನೇ ಬಾರಿ ಅಂತಿಮ-16ರ ಸುತ್ತು ತಲುಪಿದ್ದಾರೆ.
ಟೂರ್ನಿಯ ನಾಲ್ಕನೇ ಸುತ್ತಿಗೆ ತೇರ್ಗಡೆಯಾಗಿರುವ ನಡಾಲ್ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಹಾಗೂ ದಿಗ್ಗಜ ಆಟಗಾರ ರೋಜರ್ ಫೆಡರರ್ರೊಂದಿಗೆ ಸೇರ್ಪಡೆಯಾಗಿದ್ದಾರೆ. 20ನೇ ಗ್ರಾನ್ಸ್ಲಾಮ್ ಪ್ರಶಸ್ತಿಯ ನಿರೀಕ್ಷೆಯಲ್ಲಿರುವ ನಡಾಲ್ ಮುಂದಿನ ಸುತ್ತಿನಲ್ಲಿ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ರನ್ನು ಎದುರಿಸಲಿದ್ದಾರೆ. ಕಳೆದ ವರ್ಷ ಫೈನಲ್ಗೆ ತಲುಪಿದ್ದ ನಡಾಲ್ ಅವರು ಜೊಕೊವಿಕ್ಗೆ ನೇರ ಸೆಟ್ಗಳಿಂದ ಸೋತಿದ್ದರು.
Next Story