ಮಳೆಯಿಂದಾಗಿ ಭಾರತ- ಪಾಕಿಸ್ತಾನ ಅಭ್ಯಾಸ ಪಂದ್ಯ ರದ್ದು
ಮಹಿಳಾ ಟ್ವೆಂಟಿ-20 ವಿಶ್ವಕಪ್
ಬ್ರಿಸ್ಬೇನ್,ಫೆ.16: ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳ ನಡುವೆ ಐಸಿಸಿ ಮಹಿಳಾ ಟ್ವೆಂಟಿ-20ವಿಶ್ವಕಪ್ ಅಭ್ಯಾಸ ಪಂದ್ಯ ರವಿವಾರ ಮಳೆಯ ಕಾರಣದಿಂದಾಗಿ ರದ್ದಾಗಿದೆ.
ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡ ಈ ಉದ್ದೇಶಕ್ಕಾಗಿ ತಯಾರಿ ನಡೆಸಿದ್ದರೂ ಮಳೆಯಿಂದಾಗಿ ಪಂದ್ಯ ರದ್ದುಗೊಂಡಿದೆ.
ಮಳೆಯಿಂದಾಗಿ ಕ್ರೀಡಾಂಗಣ ಒದ್ದೆಯಾಗಿದ್ದ ಹಿನ್ನೆಲೆಯಲ್ಲಿ ನಾಣ್ಯ ಚಿಮ್ಮುಗೆ ಸಾಧ್ಯವಾಗಲಿಲ್ಲ. ಫೆಬ್ರವರಿ 18 ರಂದು ಭಾರತ ತನ್ನ ಎರಡನೇ ಮತ್ತು ಅಂತಿಮ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ.
ಟ್ವೆಂಟಿ-20 ಮಹಿಳಾ ವಿಶ್ವಕಪ್ ಪಂದ್ಯ ಫೆಬ್ರವರಿ 21 ರಂದು ಸಿಡ್ನಿಯಲ್ಲಿ ಭಾರತ ಮತ್ತು ಹಾಲಿ ಚಾಂಪಿಯನ್ ಮತ್ತು ನಾಲ್ಕು ಬಾರಿ ವಿಜೇತ ಆಸ್ಟ್ರೇಲಿಯ ತಂಡಗಳ ನಡುವೆ ಈಗಾಗಲೇ ನಿಗದಿಯಾಗಿದೆ.
ಆಡಿಲೇಡ್ನಲ್ಲಿ ಇಂಗ್ಲೆಂಡ್ ತನ್ನ ಮೊದಲ ಅಧಿಕೃತ ಅಭ್ಯಾಸ ಪಂದ್ಯದಲ್ಲಿ ನ್ಯೂಝಿಲ್ಯಾಂಡ್ನ್ನು ಆರು ವಿಕೆಟ್ಗಳ ಅಂತರದಲ್ಲಿ ಸೋಲಿಸಿತ್ತು. ಮಳೆಯಿಂದಾಗಿ ಶನಿವಾರ ಇಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಅಭ್ಯಾಸ ಪಂದ್ಯವನ್ನು ಆಡಲು ಸಾಧ್ಯವಾಗದ ಕಾರಣ ಆಸ್ಟ್ರೇಲಿಯದ ವಿಶ್ವಕಪ್ ಪಂದ್ಯಗಳ ತಯಾರಿಗೆ ಅಡಚಣೆ ಉಂಟಾಗಿದೆ. ಬಾಂಗ್ಲಾದೇಶ ಮತ್ತು ಮೊದಲ ಬಾರಿ ವಿಶ್ವಕಪ್ ಆಡುತ್ತಿರುವ ಥಾಯ್ಲೆಂಡ್ ವಿರುದ್ಧದ ಪಂದ್ಯವನ್ನು ಸಹ ರದ್ದುಗೊಳಿಸಲಾಯಿತು.