ಒಡಿಶಾಕ್ಕೆ ಬಂಗಾಳ ತಿರುಗೇಟು
ಶಂತನು ಮಿಶ್ರಾ(62) ಹಾಗೂ ದೆಬಾಶಿಶ್ ಸಮಂಟ್ರೆ(68)ಅರ್ಧಶತಕಗಳ ಕೊಡುಗೆ ನೆರವಿನಿಂದ ಒಂದು ಹಂತದಲ್ಲಿ 2 ವಿಕೆಟ್ಗಳ ನಷ್ಟಕ್ಕೆ 135 ರನ್ ಗಳಿಸಿದ್ದ ಒಡಿಶಾ ತಂಡ ಬಂಗಾಳ ವಿರುದ್ಧ ಮೊದಲ ಇನಿಂಗ್ಸ್ನಲ್ಲಿ ಮುನ್ನಡೆ ಪಡೆಯುವ ವಿಶ್ವಾಸದಲ್ಲಿತ್ತು. 2ನೇ ದಿನದಾಟದಂತ್ಯಕ್ಕೆ ಒಡಿಶಾದ ಮೂರು ವಿಕೆಟ್ಗಳನ್ನು ಪಡೆದ ಬಂಗಾಳ ತಿರುಗೇಟು ನೀಡಿತು. ಒಡಿಶಾ ದಿನದಾಟದಂತ್ಯಕ್ಕೆ 151 ರನ್ಗೆ 4 ವಿಕೆಟ್ ಕಳೆದುಕೊಂಡಿದ್ದು, 181 ರನ್ ಹಿನ್ನಡೆಯಲ್ಲಿದೆ. ಇದಕ್ಕೂ ಮೊದಲು ಬಂಗಾಳ ತಂಡ ಮೊದಲ ಇನಿಂಗ್ಸ್ನಲ್ಲಿ 332 ರನ್ ಗಳಿಸಿ ಆಲೌಟಾಯಿತು.
Next Story