ಕಿವೀಸ್ ವಿರುದ್ಧದ ಟೆಸ್ಟ್: ಅಲ್ಪಮೊತ್ತಕ್ಕೆ ಕುಸಿದ ಭಾರತ
ವೆಲ್ಲಿಂಗ್ಟನ್: ಟಿಮ್ ಸೌಥಿ ಮತ್ತು ಕೈಲ್ ಜೆಮೀಸನ್ ಮಾರಕ ದಾಳಿಗೆ ತತ್ತರಿಸಿರುವ ಭಾರತ ಕ್ರಿಕೆಟ್ ತಂಡ ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ 165 ರನ್ಗಳಿಗೆ ಆಲೌಟ್ ಆಗಿದೆ.
ಭಾರತದ ಬ್ಯಾಟ್ಸ್ಮನ್ಗಳಿಗೆ ಸಿಂಹಸ್ವಪ್ನರಾದ ಸೌಥಿ ತಮ್ಮ 20.1 ಓವರ್ಗಳ ದಾಳಿಯಲ್ಲಿ ಕೇವಲ 49 ರನ್ ನೀಡಿ 4 ಮಹತ್ವದ ವಿಕೆಟ್ಗಳನ್ನು ಪಡೆದರು. ಇವರಿಗೆ ಸಾಥ್ ನೀಡಿದ ಕೈಲ್ ಜೆಮಿಸನ್ 16 ಓವರ್ಗಳಲ್ಲಿ 39 ರನ್ಗೆ 4 ವಿಕೆಟ್ ಕಬಳಿಸಿದರು. ಬೌಟ್ 51 ರನ್ಗೆ ಒಂದು ವಿಕೆಟ್ ಪಡೆದರು.
ಭಾರತದ ಪರ ಏಕಾಂಗಿ ಹೋರಾಟ ನಡೆಸಿದ ಅಜಿಂಕ್ಯ ರಹಾನೆ (46) ಗರಿಷ್ಠ ಸ್ಕೋರರ್ ಎನಿಸಿದರು. 20 ಎಸೆತಗಳಲ್ಲಿ 21 ರನ್ ಸಿಡಿಸಿದ ಮುಹಮ್ಮದ್ ಶಮಿ ಕೊನೆಯವರಾಗಿ ಔಟ್ ಆದರು.
ಪ್ರತಿದಾಳಿ ನಡೆಸಿದ ಭಾರತೀಯ ಬೌಲರ್ಗಳು ನ್ಯೂಝಿಲೆಂಡ್ ತಂಡದ ಆರಂಭಿಕ ಆಟಗಾರ ಟಾಮ್ ಲ್ಯಾಥಮ್ (11) ಅವರನ್ನು ಬೇಗನೇ ಪೆವಿಲಿಯನ್ಗೆ ಕಳುಹಿಸಿದರು. ಅತಿಥೇಯರಿಗೆ ಮತ್ತೊಂದು ಆಘಾತ ನೀಡಿದ ಇಶಾಂತ್ ಶರ್ಮಾ ಟಾಮ್ ಬ್ಲಂಡಲ್ (30) ಅವರ ವಿಕೆಟ್ ಕಬಳಿಸಿದರು.
ಇತ್ತೀಚಿನ ವರದಿಗಳು ಬಂದಾಗ ನ್ಯೂಝಿಲೆಂಡ್ ತಂಡ 2 ವಿಕೆಟ್ ನಷ್ಟಕ್ಕ 148 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. 42 ರನ್ ಗಳಿಸಿದ ಕೇನ್ ವಿಲಿಯಮ್ಸ್ ಮತ್ತು 18 ರನ್ ಗಳಿಸಿದ ರಾಸ್ ಟೇಲರ್ ಕ್ರೀಸ್ನಲ್ಲಿದ್ದಾರೆ.