ನ್ಯೂ ಸೌತ್ ವೇಲ್ಸ್ ಪರ ಆಡಲಿರುವ ಝಾಂಪ
ಮೆಲ್ಬೋರ್ನ್, ಜೂ. 15:ಆಸ್ಟ್ರೇಲಿಯದ ಲೆಗ್ ಸ್ಪಿನ್ನರ್ ಆ್ಯಡಮ್ ಝಾಂಪ ಮುಂಬರುವ ಋತುವಿನಲ್ಲಿ ನ್ಯೂ ಸೌತ್ ವೇಲ್ಸ್ (ಎನ್ಎಸ್ಡಬ್ಲ್ಯು) ತಂಡದ ಪರ ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ದಕ್ಷಿಣ ಆಸ್ಟ್ರೇಲಿಯ ತಂಡದಲ್ಲಿ ಏಳು ವರ್ಷಗಳ ಕಾಲ ಆಡಿದ ನಂತರ ಝಾಂಪ ತಮ್ಮ ಹಿಂದಿನ ಕ್ಲಬ್ಗೆ ಮರಳಲಿದ್ದಾರೆ.
ಝಾಂಪ 2012ರಲ್ಲಿ ಎನ್ಎಸ್ಡಬ್ಲು ಮೂಲಕ ಪ್ರಥಮ ದರ್ಜೆ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. 28ರ ಹರೆಯದ ಝಾಂಪ ಅವರು ನಾಥನ್ ಲಿಯಾನ್, ಪ್ಯಾಟ್ ಕಮ್ಮಿನ್ಸ್, ಜೋಶ್ ಹಝಲೆವುಡ್ , ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್ ಮತ್ತು ಡೇವಿಡ್ ವಾರ್ನರ್ ಮತ್ತಿತರ ಉನ್ನತ ಕ್ರಿಕೆಟಿಗರೊಂದಿಗೆ ಡ್ರೆಸ್ಸಿಂಗ್ ಕೋಣೆಯನ್ನು ಹಂಚಿಕೊಳ್ಳಲಿದ್ದಾರೆ.
ದಕ್ಷಿಣ ಆಸ್ಟ್ರೇಲಿಯಕ್ಕೆ ತೆರಳುವ ಮೊದಲು ಝಾಂಪ ಮೂರು ಶೆಫೀಲ್ಡ್ ಶೀಲ್ಡ್ ಪಂದ್ಯಗಳನ್ನು ಮತ್ತು ಎನ್ಎಸ್ಡಬ್ಲುಗಾಗಿ ನಾಲ್ಕು ಲಿಸ್ಟ್ ‘ಎ’ ಪಂದ್ಯಗಳನ್ನು ಆಡಿದರು. ಅವರು ರೆಡ್ ಬ್ಯಾಕ್ಸ್ ಪರ 95 ಶೆಫೀಲ್ಡ್ ಶೀಲ್ಡ್ ಮತ್ತು 51 ಏಕದಿನ ವಿಕೆಟ್ಗಳನ್ನು ಪಡೆದಿದ್ದಾರೆ.
Next Story