ಚೀನಾದ ಬ್ಯಾಡ್ಮಿಂಟನ್ ಸೂಪರ್ಸ್ಟಾರ್ ಲಿನ್ ಡಾನ್ ವಿದಾಯ
ಬೀಜಿಂಗ್,ಜು.4:ಚೀನಾದ ಎರಡು ಬಾರಿಯ ಒಲಿಂಪಿಕ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಲಿನ್ ಡಾನ್ ಶನಿವಾರ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿಯಾಗುತ್ತಿರುವುದಾಗಿ ಘೋಷಿಸಿದರು.
ಪೋಸ್ಟ್ವೊಂದನ್ನು ಹಾಕಿರುವ ಲಿನ್ ಡಾನ್, ತನ್ನ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಬೀಜಿಂಗ್ ಹಾಗೂ ಲಂಡನ್ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ಲೀ ಇದೀಗ ನಿವೃತ್ತಿ ನಿರ್ಧಾರ ಪ್ರಕಟಿಸುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ನಲ್ಲಿ ಹ್ಯಾಟ್ರಕ್ ಪೂರೈಸುವ ಅವಕಾಶ ತಪ್ಪಿಸಿಕೊಂಡರು. ಈ ವರ್ಷ ನಡೆಯಬೇಕಾಗಿದ್ದ ಟೋಕಿಯೊ ಒಲಿಂಪಿಕ್ಸ್ ಕೊರೋನ ವೈರಸ್ ಕಾರಣಕ್ಕೆ ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದೆ
Next Story