ಎಬಿಡಿ, ದುಬೆ ಸ್ಪೋಟಕ ಬ್ಯಾಟಿಂಗ್: ಮುಂಬೈಗೆ 202 ರನ್ ಗಳ ಗುರಿ ನೀಡಿದ ಆರ್ಸಿಬಿ
ದುಬೈ: ಎಬಿಡಿ ವಿಲಿಯರ್ಸ್, ಶಿವಂ ದುಬೆ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 202 ರನ್ ಗಳ ಗುರಿ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್ ಸಿಬಿ ಪರ ದೇವ್ ದತ್ ಪಡಿಕ್ಕಲ್ 54 ರನ್ ಗಳಿಸಿದರೆ, ಆ್ಯರನ್ ಫಿಂಚ್ 35 ಎಸೆತಗಳಲ್ಲಿ 52 ರನ್ ಗಳಿಸಿ ಉತ್ತಮ ಆರಂಭ ನೀಡಿದರು. 4ನೆ ವಿಕೆಟ್ ಗೆ ಜೊತೆಯಾದ ಎಬಿಡಿ ವಿಲಿಯರ್ಸ್ ಜೋಡಿ ತಂಡವು ಬೃಹತ್ ಮೊತ್ತ ಕಲೆ ಹಾಕುವಲ್ಲಿ ನೆರವಾಯಿತು. 4 ಸಿಕ್ಸರ್, 4 ಬೌಂಡರಿ ಸಿಡಿಸಿದ ಎಬಿಡಿ ವಿಲಿಯರ್ಸ್ 23 ಎಸೆತಗಳಲ್ಲಿ 54 ರನ್ ಗಳಿಸಿದರು. ಶಿವಬ್ ದುಬೆ 10 ಎಸೆತಗಳಲ್ಲಿ 3 ಸಿಕ್ಸರ್ ನೆರವನಿಂದ 27 ರನ್ ಗಳಿಸಿದರು. ದುಬೆ ಕೊನೆಯ ಓವರ್ ನಲ್ಲಿ 3 ಸಿಕ್ಸರ್ ಗಳನ್ನು ಸಿಡಿಸಿದರು.
Next Story