ಮೆಸ್ಸಿಗೆ 21 ತಿಂಗಳು ಜೈಲು
ತೆರಿಗೆ ವಂಚನೆ ಆರೋಪ
ಸ್ಪೇನ್, ಜು.6: ವಿಶ್ವವಿಖ್ಯಾತ ಫುಟ್ಬಾಲ್ ಆಟಗಾರ ಲಿಯೊನೆಲ್ ಮೆಸ್ಸಿ ಹಾಗೂ ಅವರ ತಂದೆಗೆ ಸ್ಪೇನ್ ನ್ಯಾಯಾಲಯ 21 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಅರ್ಜೆಂಟೀನದ ಸ್ಟಾರ್ ಆಟಗಾರ ಮೆಸ್ಸಿ ಹಾಗೂ ಅವರ ತಂದೆ ಜಾರ್ಜ್ವಿರುದ್ಧ ಮೂರು ವಿವಿಧ ತೆರಿಗೆ ವಂಚನೆ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಯ ಜೊತೆಗೆ ದಂಡವನ್ನು ವಿಧಿಸಲಾಗಿದೆ.
ಮೆಸ್ಸಿಗೆ 2 ಮಿಲಿಯನ್ ಯುರೋಸ್ ಹಾಗೂ ಅವರ ತಂದೆಗೆ 1.5 ಮಿಲಿಯನ್ ಯುರೋಸ್ ದಂಡವನ್ನು ನ್ಯಾಯಾಲಯ ವಿಧಿಸಿದೆ.
ಸ್ಪೇನ್ನ ಕಾನೂನಿನ ಪ್ರಕಾರ ಎರಡು ವರ್ಷದೊಳಗೆ ಶಿಕ್ಷೆಗೆ ಗುರಿಯಾಗುವವರು ಪರೀಕ್ಷಣೆಯಲ್ಲಿರುತ್ತಾರೆ. ಹೀಗಾಗಿ ಇವರಿಬ್ಬರೂ ಜೈಲು ಪಾಲಾಗುವ ಸಾಧ್ಯತೆಯಿಲ್ಲ.
ಮೆಸ್ಸಿ ಹಾಗೂ ಅವರ ತಂದೆಗೆ 21 ತಿಂಗಳ ಶಿಕ್ಷೆಯ ವಿರುದ್ಧ ಸ್ಪೇನ್ನ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ.
Next Story