ವೃತ್ತಿಪರ ಬಾಕ್ಸರ್ ವಿಜೇಂದರ್ಗೆ ಪ್ರಶಸ್ತಿ
ಹೊಸದಿಲ್ಲಿ, ಜು.16: ಆಸ್ಟ್ರೇಲಿಯದ ಕೆರ್ರಿ ಹೋಪ್ರನ್ನು ಮಣಿಸಿದ ಭಾರತದ ಬಾಕ್ಸರ್ ವಿಜೇಂದರ್ ಸಿಂಗ್ ಡಬ್ಲುಬಿಒ ಏಷ್ಯಾ ಪೆಸಿಫಿಕ್ ಸೂಪರ್ ಮಿಡಲ್ ವೇಟ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ಅವರು ಸ್ವದೇಶದಲ್ಲೂ ಗೆಲುವಿನ ಓಟ ಮುಂದುವರಿಸಿದರು.
ವಿಜೇಂದರ್ ವೃತ್ತಿಪರ ಬಾಕ್ಸಿಂಗ್ನಲ್ಲಿ ಸತತ ಏಳನೆ ಗೆಲುವು ದಾಖಲಿಸಿದರು.
ಇಲ್ಲಿನ ತ್ಯಾಗರಾಜ ಸ್ಟೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ವಿಜೇಂದರ್ ಅವರು ಕೆರ್ರಿ ಅವರನ್ನು 98-92, 98-92, 100-90 ಅಂಕಗಳ ಅಂತರದಿಂದ ಮಣಿಸಿದರು.
ವೃತ್ತಿಪರ ಬಾಕ್ಸರ್ ಆದ ಬಳಿಕ ಮೊದಲ ಬಾರಿ ಸ್ವದೇಶದಲ್ಲಿ ಆಡಿದ ವಿಜೇಂದರ್ 10 ಸುತ್ತಿನ ಪಂದ್ಯದಲ್ಲಿ ಆಸೀಸ್ ಬಾಕ್ಸರ್ನ್ನು ಮಣಿಸಿ ಗಮನ ಸೆಳೆದರು.
Next Story