ಕೇರಳ ಬ್ಲಾಸ್ಟರ್ಸ್ ತಂಡ ಅನಾವರಣ
ಕೊಚ್ಚಿ, ಸೆ.7: ಕೇರಳ ಬ್ಲಾಸ್ಟರ್ಸ್ ಫುಟ್ಬಾಲ್ ಕ್ಲಬ್ ಮೂರನೆ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ಗೆ(ಐಎಸ್ಎಲ್) ತನ್ನ ತಂಡವನ್ನು ಬುಧವಾರ ಪ್ರಕಟಿಸಿದೆ. ಈ ಸಂದರ್ಭದಲ್ಲಿ ತಂಡದ ಮಾಲಕರಾದ ಸಚಿನ್ ತೆಂಡುಲ್ಕರ್, ಚಿರಂಜೀವಿ ಹಾಗೂ ನಾಗಾರ್ಜುನ ಸಹಿತ ಇತರರು ಉಪಸ್ಥಿತರಿದ್ದರು.
ಕೇರಳ ಬ್ಲಾಸ್ಟರ್ಸ್ ತಂಡ ಈ ಬಾರಿ ಭಾರೀ ಬದಲಾವಣೆ ಮಾಡಿದ್ದು, ಮ್ಯಾಂಚೆಸ್ಟರ್ ಯುನೈಟೆಡ್ನ ಸ್ಟೀಫನ್ ಕಾಪೆಲ್ ತಂಡದ ಕೋಚ್ ಆಗಿರುತ್ತಾರೆ.
ಸ್ಟಾರ್ ಆಟಗಾರರಾದ ಆ್ಯರೊನ್ ಹ್ಯೂಸ್, ಸೆಡ್ರಿಕ್ ಹೆಂಗ್ಬಾರ್ಟ್, ಗೋಲ್ಕೀಪರ್ ಗ್ರಹಾಂ ಸ್ಟಾಕ್, ಮೈಕಲ್ ಚೋಪ್ರಾ, ಅಝ್ರಕ್ ಮಹಮತ್, ಡಕೆನ್ಸ್ ನಝಾನ್, ಕೆರ್ವಿನ್ಸ್ ಬೆಫೋರ್ಟ್, ಡಿಡಿಯೆರ್ ಕಾಡಿಯೊ ಸಹಿತ 27 ಆಟಗಾರರು ತಂಡದಲ್ಲಿದ್ದಾರೆ.ಕಳೆದ ವರ್ಷ ಉತ್ತಮ ಪ್ರದರ್ಶನ ನೀಡಿದ್ದ ಅಂಟೊನಿ ಜರ್ಮನ್ ಹಾಗೂ ಜೊಸ್ಯೂ, ಭಾರತದ ಆಟಗಾರರಾದ ಸಂದೇಶ್ ಝಿಂಗಾನ್, ಮೆಹ್ತಾಬ್ ಹುಸೈನ್, ಸಂದೀಪ್ ನಂದಿ, ಮುಹಮ್ಮದ್ ರಫಿ ಹಾಗು ಗುರ್ವಿಂದರ್ ಸಿಂಗ್ ಸ್ಥಾನ ಉಳಿಸಿಕೊಂಡಿದ್ದಾರೆ.
Next Story