ಈಡನ್ಗಾರ್ಡನ್ಸ್ ಸ್ಟೇಡಿಯಂ ಸ್ಟಾಂಡ್ಗೆ ಗಂಗುಲಿ ಹೆಸರು
ಕೋಲ್ಕತಾ, ಜ.22: ಐತಿಹಾಸಿಕ ಈಡನ್ಗಾರ್ಡನ್ಸ್ ಸ್ಟೇಡಿಯಂನ ಉತ್ತರ ಭಾಗದ ಸ್ಟಾಂಡ್ಗೆ ಭಾರತದ ಮಾಜಿ ನಾಯಕ ಸೌರವ್ ಗಂಗುಲಿ ಹೆಸರು ಇಡಲಾಗಿದೆ. ಸ್ಟೇಡಿಯಂನ ಒಂದು ಬ್ಲಾಕ್ಗೆ ಖ್ಯಾತ ಗಣ್ಯರ ಹೆಸರು ಇಡುವುದು ಎಲ್ಲ ಕಡೆ ನಡೆಯುವ ಒಂದು ಸಾಮಾನ್ಯ ಪದ್ಧತಿ. ಆದರೆ, ಈಡನ್ಗಾರ್ಡನ್ಸ್ ಸ್ಟೇಡಿಯಂ ಕೇಂದ್ರ ರಕ್ಷಣಾ ಸಚಿವಾಲಯದ ಅಧೀನದಲ್ಲಿರುವ ಕಾರಣ ಈ ಪ್ರಕ್ರಿಯೆ ತುಂಬಾ ವಿಳಂಬವಾಗಿ ನಡೆದಿದೆ.
ಎಲ್ಲ ಅಡೆ-ತಡೆಗಳು ನಿವಾರಣೆಯಾದ ಕಾರಣ ಗಂಗುಲಿ ಹಾಗೂ ಸಿಎಬಿ ಮಾಜಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಹೆಸರಿರುವ ಕಪ್ಪು ಫಲಕವನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೂರನೆ ಹಾಗೂ ಅಂತಿಮ ಏಕದಿನ ಪಂದ್ಯ ಆರಂಭಕ್ಕೆ ಮೊದಲು ಅಳವಡಿಸಲಾಯಿತು.
ದೀಪಾಲಂಕೃತಗೊಂಡಿರುವ ಗಂಗುಲಿ ಹೆಸರಿನ ಪ್ಲೇಟ್ನ್ನು ಭಾರತದ ಮಾಜಿ ನಾಯಕ ಕಪಿಲ್ದೇವ್ ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಭಾರತದ ಅತ್ಯಂತ ಯಶಸ್ವಿ ನಾಯಕ ಎಂಎಸ್ ಧೋನಿ ಹಾಗೂ ಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ದೇವ್ಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
Next Story