ತೃತೀಯ ಟೆಸ್ಟ್: ಆಸ್ಟ್ರೇಲಿಯ ಎರಡನೆ ಇನಿಂಗ್ಸ್ 83/4
ರಾಂಚಿ, ಮಾ.20: ಇಲ್ಲಿ ನಡೆಯುತ್ತಿರುವ ಮೂರನೇ ಕ್ರಿಕೆಟ್ ಟೆಸ್ಟ್ ನ ಅಂತಿಮ ದಿನವಾಗಿರುವ ಇಂದು ಆಸ್ಟ್ರೇಲಿಯ ಎರಡನೇ ಇನಿಂಗ್ಸ್ ನಲ್ಲಿ ಊಟದ ವಿರಾಮದ ಹೊತ್ತಿಗೆ 36 ಓವರ್ ಗಳಲ್ಲಿ 4ವಿಕೆಟ್ ನಷ್ಟದಲ್ಲಿ 83 ರನ್ ಗಳಿಸಿದೆ.
ರೆನ್ ಶಾ (15) ಅವರನ್ನು ಇಶಾಂತ್ ಶರ್ಮ ಎಲ್ ಬಿಡಬ್ಲ್ಯು ಬಲೆಗೆ ಕೆಡವಿದ್ದಾರೆ. ನಾಯಕ ಸ್ಟೀವ್ ಸ್ಮಿತ್ (21) ಅವರು ಜಡೇಜ ಎಸೆತದಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದ್ದಾರೆ. ಎಸ್ ಮಾರ್ಷ್ 15ರನ್ ಮತ್ತು ಹಾಂಡ್ಸ್ ಕಂಬ್ (4) ಔಟಾಗದೆ ಕ್ರೀಸ್ ನಲ್ಲಿದ್ದಾರೆ.
Next Story