ಎಂಸಿಡಿ ಚುನಾವಣೆ ಹಿನ್ನೆಲೆ: ಐಪಿಎಲ್ನ ದಿಲ್ಲಿ ಪಂದ್ಯ ಸ್ಥಳಾಂತರ
ಹೊಸದಿಲ್ಲಿ, ಮಾ.20: ರಾಷ್ಟ್ರ ರಾಜಧಾನಿಯಲ್ಲಿ ಎಪ್ರಿಲ್ 22 ರಂದು ಎಂಸಿಡಿ ಚುನಾವಣೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ಆ ದಿನ ದಿಲ್ಲಿಯಲ್ಲಿ ನಿಗದಿಯಾಗಿರುವ 10ನೆ ಆವೃತ್ತಿಯ ಐಪಿಎಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರವಾಗಲಿದೆ.
ಎಪ್ರಿಲ್ 22 ರಂದು ದಿಲ್ಲಿಯ ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ನಿಗದಿಯಾಗಿತ್ತು. ಆ ದಿನವೇ ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆ ನಿಗದಿಯಾಗಿರುವ ಕಾರಣ ಪಂದ್ಯವನ್ನು ಮುಂಬೈಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಈ ವರ್ಷದ ಐಪಿಎಲ್ ಟೂರ್ನಿ ಎ.5 ರಿಂದ ಮಾ.21ರ ತನಕ ನಡೆಯಲಿದೆ.
ದಿಲ್ಲಿ ಹಾಗೂ ಮುಂಬೈ ನಡುವೆ ಮುಂಬೈನಲ್ಲಿ ಎ.22 ರಂದು ರಾತ್ರಿ 8 ಗಂಟೆಗೆ ಪಂದ್ಯ ನಡೆಯಲಿದ್ದು, ಅದೇ ದಿನ ರಾತ್ರಿ ನಡೆಯಬೇಕಾಗಿದ್ದ ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವನ್ನು ಸಂಜೆ 4ಕ್ಕೆ ನಿಗದಿಪಡಿಸಲಾಗಿದೆ ಎಂದು ಐಪಿಎಲ್ ಆಯೋಜಕರು ತಿಳಿಸಿದ್ದಾರೆ
Next Story