ಒಂದೇ ಋತುವಿನಲ್ಲಿ 40 ಗೋಲು ದಾಖಲಿಸಿದ ರೊನಾಲ್ಡೊ
ಮ್ಯಾಡ್ರಿಡ್, ಮೇ 22: ಫುಟ್ಬಾಲ್ ತಾರೆ ಕ್ರಿಸ್ಟಿನೊ ರೊನಾಲ್ಡೊ ಪ್ರಸಕ್ತ ಋತುವಿನಲ್ಲಿ 40ನೇ ಗೋಲು ದಾಖಲಿಸುವ ಮೂಲಕ ರಿಯಲ್ ಮ್ಯಾಡ್ರಿಡ್ ತಂಡ 33ನೇ ಲಾ ಲಿಗಾ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ನೆರವಾದರು. ರಿಯಲ್ ಮ್ಯಾಡ್ರಿಡ್ಗೆ ಇದು ಕಳೆದ ಐದು ವರ್ಷದಲ್ಲಿ ಇದು ಮೊದಲ ಪ್ರಶಸ್ತಿಯಾಗಿದ್ದು, ರವಿವಾರ ರಾತ್ರಿ ನಡೆದ ಕೊನೆಯ ಲೀಗ್ನಲ್ಲಿ ಮಲಗಾ ತಂಡವನ್ನು 2-0 ಅಂತರದಿಂದ ಸೋಲಿಸಿ ಪ್ರಶಸ್ತಿ ಎತ್ತಿತ್ತು.
ರಿಯಲ್ ಮ್ಯಾಡ್ರಿಡ್ ತಂಡ ಇದಕ್ಕೂ ಮುನ್ನ ಬಾರ್ಸಿಲೋನಾ ತಂಡವನ್ನು ಸೋಲಿಸಿ, ಲೀಗ್ ಪಟ್ಟಿಯಲ್ಲಿ ಮೂರು ಅಂಕಗಳ ಮುನ್ನಡೆ ಸಂಪಾದಿಸಿ ಅಗ್ರಸ್ಥಾನಿಯಾಗಿತ್ತು. ಬಾರ್ಸಿಲೋನಾದ ಕೋಚ್ ಲೂಯಿಸ್ ಎನ್ರಿಕ್ ಅವರ ತಂಡ ಸತತ ಮೂರನೇ ಬಾರಿಗೆ ಪ್ರಶಸ್ತಿ ಗಳಿಸುವ ಕನಸು ನುಚ್ಚುನೂರಾಯಿತು.
"ಇದು ನನ್ನ ವೃತ್ತಿ ಜೀವನದ ಅತ್ಯಂತ ಸಂತಸದ ಕ್ಷಣ" ಎಂದು ಮ್ಯಾಡ್ರಿಡ್ ನಾಯಕ ಜಿನ್ದಿನೆ ಜಿದಾನೆ ಪ್ರತಿಕ್ರಿಯಿಸಿದ್ದಾರೆ. ಈ ಕ್ಲಬ್ನಲ್ಲಿ ನಾನು ಎಲ್ಲವನ್ನೂ ಗೆದ್ದಿದ್ದೇನೆ, ಆದರೆ ಲಾ ಲಿಗಾ ಇವೆಲ್ಲದಕ್ಕಿಂತಲೂ ಉತ್ತಮ ಜಯ" ಎಂದು ಬಣ್ಣಿಸಿದ್ದಾರೆ.
ಮ್ಯಾಡ್ರಿಡ್ ಪ್ರಶಸ್ತಿ ಗೆಲ್ಲಲು ಈ ಪಂದ್ಯ ಡ್ರಾ ಮಾಡಿಕೊಂಡಿದ್ದರೂ ಸಾಕಿತ್ತು. ಸಂಘಟಿತ ನಿರ್ವಹಣೆಯಲ್ಲಿ ರಿಯಲ್ ಮ್ಯಾಡ್ರಿಡ್ಗೆ ಇದು ಅತ್ಯುತ್ತಮ ವರ್ಷ ಎಂದು ರೊನಾಲ್ಡೊ ಬಣ್ಣಿಸಿದ್ದಾರೆ.