ಲಂಡನ್ ಭೇಟಿ ಮುಂದೂಡಿದ ರೊನಾಲ್ಡೊ
ಲಂಡನ್, ಮೇ 26: ಮ್ಯಾಂಚೆಸ್ಟರ್ನಲ್ಲಿ ಭಯೋತ್ಪಾದಕ ದಾಳಿ ನಡೆದ ಹಿನ್ನೆಲೆಯಲ್ಲಿ ಫುಟ್ಬಾಲ್ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ ಲಂಡನ್ಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಮುಂದೂಡಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಮಾಜಿ ಆಟಗಾರ ರೊನಾಲ್ಡೊ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಂಡನ್ಗೆ ತೆರಳಬೇಕಾಗಿತ್ತು. ಸೋಮವಾರ ಮ್ಯಾಂಚೆಸ್ಟರ್ ಅರೆನಾದಲ್ಲಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ 21 ಮಂದಿ ಸಾವನ್ನಪ್ಪಿದ್ದು, ಇಂಗ್ಲೆಂಡ್ನಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
‘‘ಇಂಗ್ಲೆಂಡ್ನಲ್ಲಿ ಉಗ್ರಗಾಮಿಗಳ ದಾಳಿಯ ಬೆದರಿಕೆ ಇರುವ ಕಾರಣ ಶನಿವಾರ ನಡೆಯಬೇಕಾಗಿದ್ದ ಕ್ರಿಸ್ಟಿಯಾನೊ ರೊನಾಲ್ಡೊರ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದು ತಿಳಿಸಲು ಬೇಸರವಾಗುತ್ತಿದೆ ಎಂದು ಸಿಕ್ಸ್ಪ್ಯಾಡ್ ತರಬೇತಿ ಸಾಧನಗಳ ಕಂಪೆನಿ ತಿಳಿಸಿದೆ.
Next Story