ಕಾನ್ಫಡರೇಶನ್ ಕಪ್: ಚಿಲಿ-ಜರ್ಮನಿ ಪಂದ್ಯ ಡ್ರಾ; ಸ್ಯಾಂಚೆಝ್ ಐತಿಹಾಸಿಕ ಸಾಧನೆ
ಕಝಾನ್(ರಶ್ಯ), ಜೂ.23: ಜರ್ಮನಿ ಹಾಗೂ ಚಿಲಿ ನಡುವಿನ ಕಾನ್ಫಡರೇಶನ್ ಕಪ್ 1-1 ರಿಂದ ಡ್ರಾಗೊಂಡಿದ್ದು, ಈ ಫಲಿತಾಂಶ ಉಭಯ ತಂಡಗಳ ಸೆಮಿಫೈನಲ್ ಅವಕಾಶಕ್ಕೆ ಹಿನ್ನಡೆಯಾಗಿದೆ.
38ನೆ ಅಂತಾರಾಷ್ಟ್ರೀಯ ಗೋಲು ಬಾರಿಸಿದ ಅಲೆಕ್ಸ್ ಸ್ಯಾಂಚೆಝ್ ಚಿಲಿಯ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಪಂದ್ಯ ಆರಂಭವಾಗಿ ಆರು ನಿಮಿಷ ಕಳೆಯುವಷ್ಟರಲ್ಲಿ ಸ್ಯಾಂಚೆಜ್ ಚಿಲಿ ತಂಡಕ್ಕೆ 1-0 ಮುನ್ನಡೆ ಒದಗಿಸಿಕೊಟ್ಟರು. ಮಾತ್ರವಲ್ಲ ಚಿಲಿ ಪರ ಗರಿಷ್ಠ ಗೋಲು ಬಾರಿಸಿದ ಸಾಧನೆ ಮಾಡಿದರು.
41ನೆ ನಿಮಿಷದಲ್ಲಿ ಗೋಲು ಬಾರಿಸಿದ ಜರ್ಮನಿಯ ಲಾರ್ಸ್ ಸ್ಟಿಂಡಿ ಸ್ಕೋರನ್ನು 1-1ರಿಂದ ಸಮಬಲಗೊಳಿಸಿದರು. ಈ ಫಲಿತಾಂಶದಿಂದಾಗಿ ದಕ್ಷಿಣ ಅಮೆರಿಕ ಚಾಂಪಿಯನ್ ಚಿಲಿ ‘ಬಿ’ ಗುಂಪಿನಲ್ಲಿ ವಿಶ್ವಕಪ್ ಚಾಂಪಿಯನ್ ಜರ್ಮನಿಯ ವಿರುದ್ಧ ಗೋಲು ವ್ಯತ್ಯಾಸದಲ್ಲಿ ಅಗ್ರ ಸ್ಥಾನ ಪಡೆದಿದೆ.
ಉಭಯ ತಂಡಗಳು 2 ಪಂದ್ಯಗಳಲ್ಲಿ ತಲಾ ನಾಲ್ಕು ಅಂಕ ಗಳಿಸಿದ್ದು, ಜರ್ಮನಿ ರವಿವಾರ ಸೋಚಿಯಲ್ಲಿ ಕ್ಯಾಮರೂನ್ ತಂಡವನ್ನು ಹಾಗೂ ಚಿಲಿ ತಂಡ ಮಾಸ್ಕೊದಲ್ಲಿ ಆಸ್ಟ್ರೇಲಿಯ ತಂಡವನ್ನು ಎದುರಿಸಲಿವೆ. ಎರಡು ತಂಡಗಳಿಗೆ ಸೆಮಿ ಫೈನಲ್ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕಾದರೆ ಗೆಲುವು ಸಾಧಿಸಲೇಬೇಕಾಗಿದೆ.