ಸಚಿನ್, ಮುಹಮ್ಮದ್ ಖಾನ್ ಸೆಮಿ ಫೈನಲ್ಗೆ
ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್
ಬ್ಯಾಂಕಾಕ್,ಜು.4: ವಿಶ್ವದ ಯೂತ್ ಚಾಂಪಿಯನ್ ಸಚಿನ್ ಸಿವಾಚ್(49 ಕೆಜಿ) ಹಾಗೂ ಇತರ ಇಬ್ಬರು ಬಾಕ್ಸರ್ಗಳು ಏಷ್ಯನ್ ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಮಂಗಳವಾರ ಸೆಮಿ ಫೈನಲ್ಗೆ ತಲುಪಿದ್ದಾರೆ.
ಸಚಿನ್ ಅವರು ಸರ್ವಸಮ್ಮತ ತೀರ್ಪಿನಲ್ಲಿ ಫಿಲಿಪ್ಪೀನ್ಸ್ನ ಜೇಮ್ಸ್ ಇಯಾನ್ ಸೊಲಿಸ್ರನ್ನು ಮಣಿಸಿದರು. ಮುಂದಿನ ಸುತ್ತಿನಲ್ಲಿ ಥಾಯ್ಲೆಂಡ್ನ ಪ್ರನ್ಮೋದ್ ಥಿಟಿಸನ್ರನ್ನು ಎದುರಿಸಲಿದ್ದಾರೆ.
ಇ.ಮುಹಮ್ಮದ್ ಖಾನ್(56ಕೆಜಿ) ಹಾಗೂ ಸಚಿನ್(75 ಕೆಜಿ) ಕೂಡ ಸೆಮಿ ಫೈನಲ್ಗೆ ಪ್ರವೇಶಿಸಿದ್ದಾರೆ. ಖಾನ್ ಫಿಲಿಪ್ಪೀನ್ಸ್ನ ಲೌರಂಟ್ ಪಿಟ್ರನ್ನು ಮಣಿಸಿದರು. ಸೆಮಿ ಫೈನಲ್ನಲ್ಲಿ ಥಾಯ್ಲೆಂಡ್ನ ಪ್ಲುಯೆಮ್ ವಾಂಗ್ಕ್ಲಾಕ್ಲಾಂಗ್ರನ್ನು ಎದುರಿಸಲಿದ್ದಾರೆ.
ಸಚಿನ್ ಜಪಾನ್ನ ರಿಕು ಕೊಂಡೊರನ್ನು ಸುಲಭವಾಗಿ ಮಣಿಸಿದರು. ಸೆಮಿ ಫೈನಲ್ನಲ್ಲಿ ಚೀನಾದ ಝು ಚಾವೊರನ್ನು ಎದುರಿಸಲಿದ್ದಾರೆ.
ಭಾರತದ ಒಟ್ಟು ಆರು ಬಾಕ್ಸರ್ಗಳು ಸೆಮಿ ಫೈನಲ್ಗೆ ತಲುಪಿದ್ದು, ಕನಿಷ್ಠ ಆರು ಪದಕಗಳನ್ನು ದೃಢಪಡಿಸಿದ್ದಾರೆ.
ನವೀನ್ ಬೋರಾ, ಅಂಕಿತ್, ಹರ್ಷ್ಪ್ರೀತ್ ಸಹ್ರವತ್ ಈಗಾಗಲೇ ಸೆಮಿಫೈನಲ್ಗೆ ತಲುಪಿದ್ದಾರೆ