ವಿಂಬಲ್ಡನ್ ಆಡಿದ ಗರ್ಭಿಣಿ ಆಟಗಾರ್ತಿ
ಲಂಡನ್, ಜು.4: ನಾಲ್ಕೂವರೆ ತಿಂಗಳ ಗರ್ಭಿಣಿ ಲಕ್ಸಂಬರ್ಗ್ನ ಮಾಂಡಿ ಮಿನೆಲ್ಲಾ ವಿಂಬಲ್ಡನ್ ಟೂರ್ನಿಯಲ್ಲಿ ಆಡುವ ಮೂಲಕ ಎಲ್ಲರ ಗಮನ ಸೆಳೆದರು.
31ರ ಹರೆಯದ ಈ ಆಟಗಾರ್ತಿ ಇಟಲಿಯ ಫ್ರಾನ್ಸಿಕಾ ಸ್ಚಿಯವೊನ್ ವಿರುದ್ಧ 6-1, 6-1 ನೇರ ಸೆಟ್ಗಳಿಂದ ಸೋಲುವುದರೊಂದಿಗೆ ಮೊದಲ ಸುತ್ತಿನಲ್ಲಿ ಹೊರ ನಡೆದರು.
ಈ ಋತುವಿನಲ್ಲಿ ವಿಂಬಲ್ಡನ್ ನನ್ನ ಕೊನೆಯ ಟೂರ್ನಿಯಾಗಿದೆ ಎಂದು ವಿಶ್ವದ ನಂ.82ನೆ ಆಟಗಾರ್ತಿ ಸುದ್ದಿಗಾರರಿಗೆ ತಿಳಿಸಿದರು.
ಗರ್ಭಿಣಿಯಾಗಿರುವ ಮಿನೆಲ್ಲಾ ಸೆರೆನಾ ವಿಲಿಯಮ್ಸ್ ಹಾಗೂ ವಿಕ್ಟೋರಿಯ ಅಝೆರೆಂಕಾ ಸಾಲಿಗೆ ಸೇರ್ಪಡೆಯಾದರು. ಈ ಇಬ್ಬರು ಆಟಗಾರ್ತಿಯರು ಗರ್ಭಿಣಿಯರಾಗಿದ್ದಾರೆ. ಮಿನೆಲ್ಲಾ ಮಹಿಳೆಯರ ಡಬಲ್ಸ್ನಲ್ಲಿ ಲಾಟ್ವಿಯದ ಅನಸ್ಟಸಿಜಾ ಸೆವಾಸ್ಟೊವಾರೊಂದಿಗೆ ಮತ್ತೆ ಸ್ಪರ್ಧೆಗೆ ಇಳಿಯಲಿದ್ದಾರೆ.
Next Story