ಬಾರ್ಸಿಲೋನದೊಂದಿಗೆ ಒಪ್ಪಂದ ವಿಸ್ತರಿಸಿದ ಮೆಸ್ಸಿ
ಮ್ಯಾಡ್ರಿಡ್, ಜು.5: ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿ ಸ್ಪೇನ್ನ ಫುಟ್ಬಾಲ್ ಕ್ಲಬ್ ಬಾರ್ಸಿಲೋನದೊಂದಿಗೆ ತನ್ನ ಒಪ್ಪಂದವನ್ನು 2021ರ ಜೂನ್ ತನಕ ವಿಸ್ತರಿಸಿದ್ದಾರೆ ಎಂದು ಕ್ಲಬ್ ಬುಧವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.
ಬಾರ್ಸಿಲೋನ ಕ್ಲಬ್ ಮೆಸ್ಸಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದ ವಿವರಗಳನ್ನು ನೀಡಿಲ್ಲ. ಮೆಸ್ಸಿಯ ಹಾಲಿ ಒಪ್ಪಂದದ ಅವಧಿಯು 2018ರ ಜೂನ್ಗೆ ಕೊನೆಗೊಳ್ಳಲಿದೆ.
30ರ ಹರೆಯದ ಅರ್ಜೆಂಟೀನದ ಆಟಗಾರ 2000ರಲ್ಲಿ ತನ್ನ 13ನೆ ವಯಸ್ಸಿನಲ್ಲಿ ಬಾರ್ಸಿಲೋನ ಎಫ್ಸಿಯನ್ನು ಸೇರ್ಪಡೆಯಾಗಿದ್ದರು.
583 ಅಧಿಕೃತ ಪಂದ್ಯಗಳಲ್ಲಿ 507 ಗೋಲುಗಳನ್ನು ಬಾರಿಸಿರುವ ಮೆಸ್ಸಿ ಕ್ಲಬ್ನ ಸಾರ್ವಕಾಲಿಕ ಶ್ರೇಷ್ಠ ಸ್ಕೋರರ್ ಆಗಿದ್ದಾರೆ. ವಿಶ್ವಶ್ರೇಷ್ಠ ಆಟಗಾರರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.
Next Story