ಮೊದಲ ಟೆಸ್ಟ್ : ಭಾರತ 399/3
ದ್ವಿಶತಕ ವಂಚಿತ ಧವನ್
ಗಾಲೆ, ಜು.26: ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್ನಲ್ಲಿ ಭಾರತ ಶಿಖರ್ ಧವನ್ ಮತ್ತು ಚೇತೇಶ್ವರ ಪೂಜಾರ ದಾಖಲಿಸಿದ ಶತಕಗಳ ನೆರವಿನಲ್ಲಿ ಮೊದಲ ದಿನದಾಟದಂತ್ಯಕ್ಕೆ 90 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 399 ರನ್ ಗಳಿಸಿದೆ.
ಚೇತೇಶ್ವರ ಪೂಜಾರ ಔಟಾಗದೆ 144 ರನ್(247ಎ, 12ಬೌ ) ಮತ್ತು ಅಜಿಂಕ್ಯ ರಹಾನೆ 39 ರನ್ ಗಳಿಸಿ ಔಟಾಗದೆ ಕ್ರೀಸ್ನಲ್ಲಿದ್ದಾರೆ.
ಶಿಖರ್ ಧವನ್ 190 ರನ್ (, 168ಎ, 31ಬೌ) ಮತ್ತು ಅಭಿನವ್ ಮುಕುಂದ್ 12 ರನ್ ಮತ್ತು ವಿರಾಟ್ ಕೊಹ್ಲಿ 3 ರನ್ ಗಳಿಸಿ ನುವಾನ್ ಪ್ರದೀಪ್ಗೆ ವಿಕೆಟ್ ಒಪ್ಪಿಸಿದರು.
ಶಿಖರ್ ಧವನ್ 24ಟೆಸ್ಟ್ನಲ್ಲಿ 5ನೆ ಶತಕ ಮತ್ತು ಪೂಜಾರ 49 ಟೆಸ್ಟ್ನಲ್ಲಿ 12ನೆ ಶತಕ ದಾಖಲಿಸಿದರು.
ಲಂಕಾದ ನುವಾನ್ ಪ್ರದೀಪ್ 64ರನ್ಗೆ 3 ವಿಕೆಟ್ ಪಡೆದರು.
Next Story