ಬಿಡಬ್ಲ್ಯುಎಫ್ ರ್ಯಾಂಕಿಂಗ್: ಪ್ರಣೀತ್, ಸಮೀರ್ಗೆ ಭಡ್ತಿ
ಹೊಸದಿಲ್ಲಿ, ಸೆ.15: ಶಟ್ಲರ್ಗಳಾದ ಸಾಯಿ ಪ್ರಣೀತ್ ಹಾಗೂ ಸಮೀರ್ ವರ್ಮ ಶುಕ್ರವಾರ ಬಿಡುಗಡೆಯಾದ ಬಿಡಬ್ಲ್ಯುಎಫ್ ರ್ಯಾಂಕಿಂಗ್ನಲ್ಲಿ ಕ್ರಮವಾಗಿ 16ನೆ ಹಾಗೂ 25ನೆ ಸ್ಥಾನಕ್ಕೇರಿದ್ದಾರೆ. ಈಗ ನಡೆಯುತ್ತಿರುವ ಕೊರಿಯಾ ಓಪನ್ನಿಂದ ದೂರ ಉಳಿದಿರುವ ಅಜಯ್ ಜಯರಾಮ್ 17ನೆ ಸ್ಥಾನಕ್ಕೆ ಕುಸಿದಿದ್ದಾರೆ. ಕಿಡಂಬಿ ಶ್ರೀಕಾಂತ್ 8ನೆ ಸ್ಥಾನವನ್ನು ಕಾಯ್ದುಕೊಳ್ಳುವುದರೊಂದಿಗೆ ಉತ್ತಮ ರ್ಯಾಂಕಿನಲ್ಲಿರುವ ಭಾರತದ ಆಟಗಾರ ಎನಿಸಿಕೊಂಡಿದ್ದಾರೆ. ಎಚ್.ಎಸ್.ಪ್ರಣಯ್ ಕೂಡ 18ನೆ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಮಹಿಳಾ ಶಟ್ಲರ್ಗಳಾದ ಪಿ.ವಿ.ಸಿಂಧು ಹಾಗೂ ಸೈನಾ ನೆಹ್ವಾಲ್ ಕ್ರಮವಾಗಿ ನಾಲ್ಕನೆ ಹಾಗೂ 12ನೆ ಸ್ಥಾನದಲ್ಲಿ ಮುಂದುವರಿದಿದ್ದಾರೆ.
ಮಹಿಳಾ ಡಬಲ್ಸ್ ಜೋಡಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್.ಸಿಕ್ಕಿ ರೆಡ್ಡಿ 25ನೆ ಸ್ಥಾನಕ್ಕೆ ಕುಸಿದಿದ್ದಾರೆ. ಮಿಕ್ಸೆಡ್ ಡಬಲ್ಸ್ ಜೋಡಿ ಪ್ರಣವ್ ಚೋಪ್ರಾ ಹಾಗೂ ಸಿಕ್ಕಿ ರೆಡ್ಡಿ 20ನೆ ಸ್ಥಾನದಲ್ಲಿದ್ದಾರೆ.
Next Story