ಟಿ20 ಇತಿಹಾಸದಲ್ಲಿ ಹೊಸ ದಾಖಲೆ ನಿರ್ಮಿಸಿದ ಕ್ರಿಸ್ ಗೇಲ್
ಹೊಸದಿಲ್ಲಿ, ಸೆ.17: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಟಿ20 ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ಕ್ರಿಕೆಟ್ ನಲ್ಲಿ ಹಲವು ದಾಖಲೆಗಳನ್ನು ಈಗಾಗಲೇ ನಿರ್ಮಿಸಿರುವ ಗೇಲ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಟಿ20 ಇತಿಹಾಸದಲ್ಲೇ 100 ಸಿಕ್ಸರ್ ಸಿಡಿಸಿದ ಪ್ರಪ್ರಥಮ ಬ್ಯಾಟ್ಸ್ ಮೆನ್ ಆಗಿ ಗೇಲ್ ಹೊರಹೊಮ್ಮಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ 21 ಬಾಲ್ ಗಳಲ್ಲಿ 40 ರನ್ ಗಳಿಸಿದ್ದ ಗೇಲ್ 4 ಸಿಕ್ಸರ್ ಗಳನ್ನು ಸಿಡಿಸಿದ್ದರು. ಪಂದ್ಯದ ಆರಂಭದಲ್ಲಿ ಗೇಲ್ ಈ ಹೊಸ ದಾಖಲೆಯನ್ನು ನಿರ್ಮಿಸಲು ಒಂದು ಸಿಕ್ಸರ್ ಸಿಡಿಸಬೇಕಾಗಿತ್ತು. 49ನೆ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ ಆಟಗಾರ ಈ ದಾಖಲೆ ನಿರ್ಮಿಸಿದ್ದಾರೆ.
91 ಸಿಕ್ಸರ್ ಗಳನ್ನು ಸಿಡಿಸಿರುವ ನ್ಯೂಝಿಲ್ಯಾಂಡ್ ನಾಯಕ ಬ್ರೆಂಡನ್ ಮೆಕ್ ಕಲಮ್ 2ನೆ ಸ್ಥಾನದಲ್ಲಿದ್ದು, ಗೇಲ್ ಅವರಿಗಿಂತ 12 ಸಿಕ್ಸರ್ ಗಳಷ್ಟು ಮುಂದಿದ್ದಾರೆ.
Next Story