ಈ ಹೊತ್ತಿನ ಹೊತ್ತಿಗೆ

ತಾಳಿಕೋಟೆಯ ಕದನದಲ್ಲಿ-ಮನಸ್ಸಿನ ತಾಕಲಾಟ

ನ್ನಡದಲ್ಲಿ ಜನಪ್ರಿಯ ಕಾದಂಬರಿಗಳ ಕೊರತೆಯನ್ನು ನೀಗಿಸುವ ಪ್ರಯತ್ನವನ್ನು ‘ತಾಳಿಕೋಟೆಯ ಕದನದಲ್ಲಿ’ ಕೃತಿಯ ಮೂಲಕ ಕಾದಂಬರಿಕಾರ ವಿಠಲ್ ಶೆಣೈ ಮಾಡುತ್ತಾರೆ. ಮನಶ್ಶಾಸ್ತ್ರೀಯ ಹಿನ್ನೆಲೆಯಿಂದ ರೂಪುಗೊಂಡಿರುವ ಕಥಾವಸ್ತುವನ್ನು ಈ ಕಾದಂಬರಿ ಒಳಗೊಂಡಿದೆ. ಸಾಧಾರಣವಾಗಿ ಮನಶ್ಶಾಸ್ತ್ರೀಯ ಹಿನ್ನೆಲೆಯಿರುವ ಸಿನೆಮಾಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ. ಸ್ಕಿಜೋಫ್ರೇನಿಯ, ಅಲ್‌ಝೈಮರ್‌ನಂತಹ ಕಾಯಿಲೆಗಳನ್ನು ಇಟ್ಟುಕೊಂಡು ಥ್ರಿಲ್ಲರ್ ಸಿನೆಮಾಗಳು ಹಲವು ಬಂದಿವೆ. ಸಿನೆಮಾಗಳಲ್ಲಿ ಮಾನಶ್ಶಾಸ್ತ್ರೀಯ ವಿಷಯಗಳನ್ನು ಅತ್ಯಂತ ಸರಳೀಕರಣಗೊಳಿಸಲಾಗುತ್ತದೆ. ಕತೆಗೆ ಪೂರಕವಾಗಿ ಅದು ತೀರಾ ನಾಟಕೀಯವಾಗಿಯೂ ಇರುತ್ತದೆ. ವಾಸ್ತವದಲ್ಲಿ ಮನಶ್ಶಾಸ್ತ್ರೀಯ ವಿಷಯಗಳು ಅಷ್ಟು ಸರಳವಾಗಿರುವುದಿಲ್ಲ.

 ಇಲ್ಲಿ ಕಾದಂಬರಿಕಾರರು ತಮ್ಮ ಕತೆಯನ್ನು ಹೇಳಲು ಎರಡು ತಂತ್ರಗಳನ್ನು ಬಳಸಿಕೊಂಡಿದ್ದಾರೆ. ಒಂದು ಇತಿಹಾಸ. ಇನ್ನೊಂದು ವಾಸ್ತವ. ಕಾದಂಬರಿಯ ಮುನ್ನುಡಿಯಲ್ಲಿ ಹೇಳುವಂತೆ , ಮಾನವನ ಚರಿತ್ರೆಗೂ ಆತನ ಮೆದುಳಿಗೂ ನೇರ ಸಂಬಂಧವಿದೆ. ಚರಿತ್ರೆಯಷ್ಟೇ ಅವನ ಮೆದುಳು, ಮನಸ್ಸು, ಸಂಕೀರ್ಣವಾದದ್ದು, ಕೌತುಕವಾದದ್ದು. ಸೂಕ್ಷ್ಮವಾದದ್ದು. ಇದು ಕದಡಿದಾಗ ವರ್ತಮಾನವೂ ಕದಡತೊಡಗುತ್ತದೆ. ಇಲ್ಲಿ ಕಾದಂಬರಿಕಾರನನ್ನು ಸೆಳೆದಿರುವುದು ಹಂಪಿಯ ಇತಿಹಾಸ. ವಿಜಯನಗರದ ಕಾಲಘಟ್ಟ ಕಾದಂಬರಿಕಾರನನ್ನು ರೋಮಾಂಚನಗೊಳಿಸಿದೆ. ಕಾದಂಬರಿಕಾರರು, ತಾಳಿಕೋಟೆ ಕದನದ ಇತಿಹಾಸವನ್ನು ಅಂತರ್ಜಾಲದ ಮೂಲಕ ಸಂಗ್ರಹಿಸಿದ್ದಾರೆ. ಸಾಧಾರಣವಾಗಿ, ಜನಪ್ರಿಯ ದಾಟಿಯಲ್ಲಿ ಇಂದು ತಾಳಿಕೋಟೆ ಕದನವನ್ನು ವೈಭವೀಕರಿಸಿದಂತೆಯೇ ಲೇಖಕರೂ ವೈಭವೀಕರಿಸುತ್ತಾರೆ. ಸಂತೆಯಲ್ಲಿ ವಜ್ರ ವೈಢೂರ್ಯಗಳನ್ನು ಮಾರುವ ಇತಿಹಾಸ ಲೇಖಕರನ್ನೂ ರೋಮಾಂಚನಗೊಳಿಸಿದೆ. ಈ ನಿಟ್ಟಿನಲ್ಲಿ, ಇತಿಹಾಸ ಮತ್ತು ವಾಸ್ತವಗಳೆರಡನ್ನೂ ಜೊತೆಗಿಟ್ಟು ಬರೆದಿದ್ದಾರೆ.
ಸ್ಕಿಜೋಫ್ರೀನಿಯಾದಿಂದ ನರಳುವ ಕಥಾನಾಯಕನ ಕಾಯಿಲೆಯನ್ನು ಹೋಗಲಾಡಿಸಲು ವಿಜಯನಗರದ ಚರಿತ್ರೆಯ ತುಣುಕುಗಳನ್ನು, ಪಾತ್ರಗಳನ್ನು ವಾಸ್ತವಕ್ಕೆ ತರಲು ಲೇಖಕರು ಪ್ರಯತ್ನಿಸಿರುವುದು ಒಂದು ವಿಭಿನ್ನ ಪ್ರಯತ್ನವೇ ಸರಿ. ಆದರೆ, ಮನಶ್ಶಾಸ್ತ್ರವನ್ನು ಸಿನಿಮೀಯ ದಾಟಿಯಲ್ಲಿ ಅರ್ಥೈಸಿಕೊಂಡು ಅವರು ಕಾಯಿಲೆಯನ್ನು ಚರ್ಚಿಸಿದ್ದಾರೆ. ಇತಿಹಾಸ ಮತ್ತು ವರ್ತಮಾನಗಳ ನಡುವೆ ತಾಕಲಾಟಗಳನ್ನು ಈ ಕಾದಂಬರಿಯಲ್ಲಿ ಕಾಣಬಹುದು. ಇತಿಹಾಸವನ್ನು ಹಿನ್ನೆಲೆಯಾಗಿಟ್ಟುಕೊಂಡು ಬರೆದ ಒಂದು ಮನಶ್ಶಾಸ್ತ್ರೀಯ ಕಾದಂಬರಿ ಎಂದು ಸರಳವಾಗಿ ಇದನ್ನು ಗುರುತಿಸಬಹುದು. ಇತಿಹಾಸವನ್ನು ರಂಜನಾತ್ಮಕವಾಗಿ ಸ್ವೀಕರಿಸುವರಿಗೆ ಈ ಕಾದಂಬರಿ ಇಷ್ಟವಾಗಬಹುದು.
ಟೋಟಲ್ ಕನ್ನಡ, ಬೆಂಗಳೂರು ಈ ಕೃತಿಯನ್ನು ಹೊರತಂದಿದೆ. 160 ಪುಟಗಳ ಈ ಕಾದಂಬರಿಯ ಮುಖಬೆಲೆ 150 ರೂಪಾಯಿ. ಆಸಕ್ತರು 98459 04451 ದೂರವಾಣಿಯನ್ನು ಸಂಪರ್ಕಿಸಬಹುದು.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top