ಝಾಕಿರ್ ನಾಯ್ಕ್ ವಿರುದ್ಧ ಆರೋಪಪಟ್ಟಿ ದಾಖಲಿಸಲು ಸಿದ್ಧತೆ
ಹೊಸದಿಲ್ಲಿ, ಅ.22: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದಲ್ಲಿ ಹಾಗೂ ಹಣ ಚಲುವೆ ಪ್ರಕರಣದಲ್ಲಿ ಧಾರ್ಮಿಕ ವಿದ್ವಾಂಸ ಝಾಕಿರ್ ನಾಯ್ಕ್ ವಿರುದ್ಧ ರಾಷ್ಟ್ರೀಯ ತನಿಖಾ ಸಮಿತಿ(ಎನ್ಐಎ) ಈ ವಾರ ಆರೋಪಪಟ್ಟಿ ದಾಖಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷದ ಜುಲೈ ತಿಂಗಳಲ್ಲಿ ದೇಶತೊರೆದಿರುವ ಝಾಕಿರ್ ವಿರುದ್ಧ ಆರೋಪಪಟ್ಟಿ ರೂಪಿಸುವ ಔಪಚಾರಿಕ ವಿಧಿವಿಧಾನ ಮುಗಿದಿದ್ದು ಈ ವಾರ ವಿಶೇಷ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
51ರ ಹರೆಯದ ಝಾಕಿರ್ ನಾಯ್ಕ್ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಪರಿಚ್ಛೇದದಡಿ ಎನ್ಐಎ ಮುಂಬೈ ಶಾಖೆಯಲ್ಲಿ 2016ರ ನವೆಂಬರ್ 18ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಝಾಕಿರ್ ನಾಯ್ಕ್ ಒಡೆತನದ ಟಿವಿ ಚಾನೆಲ್ನ ಪ್ರಸಾರವನ್ನು ನಿಷೇಧಿಸಿರುವ ಕೇಂದ್ರ ಸರಕಾರ ಈ ವರ್ಷಾರಂಭದಲ್ಲಿ ಅವರ ಪಾಸ್ಪೋರ್ಟ್ ಅನ್ನು ರದ್ದುಗೊಳಿಸಿದೆ.
Next Story