ಬಾಂಗ್ಲಾ: 139 ಸೈನಿಕರ ಮರಣ ದಂಡನೆ ಎತ್ತಿಹಿಡಿದ ನ್ಯಾಯಾಲಯ
ಢಾಕಾ, ನ. 27: 2009ರಲ್ಲಿ ನಡೆದ ಸೇನಾ ದಂಗೆಯಲ್ಲಿ ವಹಿಸಿರುವ ಪಾತ್ರಗಳಿಗಾಗಿ 139 ಸೈನಿಕರಿಗೆ ವಿಧಿಸಲಾಗಿರುವ ಮರಣ ದಂಡನೆಯನ್ನು ಬಾಂಗ್ಲಾದೇಶದ ಮೇಲ್ಮನವಿ ನ್ಯಾಯಾಲಯವೊಂದು ಸೋಮವಾರ ಎತ್ತಿಹಿಡಿದಿದೆ.
ಆ ದಂಗೆಯಲ್ಲಿ 57 ಹಿರಿಯ ಅಧಿಕಾರಿಗಳು ಸೇರಿದಂತೆ 74 ಸೇನಾಧಿಕಾರಿಗಳನ್ನು ಹತ್ಯೆಗೈಯಲಾಗಿತ್ತು.
ತೀರ್ಪು ನೀಡಿದ ನ್ಯಾಯಾಧೀಶ ಮುಹಮ್ಮದ್ ಅಬು ಝಫರ್ ಸಿದ್ದೀಕ್, 2009ರ ಹತ್ಯಾಕಾಂಡವು ಬಾಂಗ್ಲಾದೇಶದ ಕಿರಿದಾದ ಇತಿಹಾಸದಲ್ಲಿ ನಡೆದ ಅಭೂತಪೂರ್ವ ದೌರ್ಜನ್ಯವಾಗಿದೆ ಎಂದು ಬಣ್ಣಿಸಿದರು.
ಈ ತೀರ್ಪನ್ನು ಕೊನೆಯದಾಗಿ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲು ಅವಕಾಶವಿದೆ.
2013ರಲ್ಲಿ ಸಾಮೂಹಿಕ ವಿಚಾರಣೆ ನಡೆಸಿದ ನ್ಯಾಯಾಲಯವೊಂದು 152 ಸೈನಿಕರಿಗೆ ಮರಣ ದಂಡನೆ ವಿಧಿಸಿತ್ತು. ಆ ಪೈಕಿ ಓರ್ವ ಕಸ್ಟಡಿಯಲ್ಲಿ ಮೃತಪಟ್ಟಿದ್ದಾನೆ. ಎಂಟು ಮಂದಿಯ ಮರಣ ದಂಡನೆ ಜೀವಾವಧಿ ಶಿಕ್ಷೆಗೆ ಇಳಿದಿದೆ ಹಾಗೂ ನಾಲ್ವರನ್ನು ಖುಲಾಸೆಗೊಳಿಸಲಾಗಿದೆ.
Next Story