ಪ್ರಧಾನಿ ಮೋದಿ ಭಾರತೀಯರ ಮೇಲೆ ಬೇಹುಗಾರಿಕೆ ನಡೆಸುವ ‘ಬಿಗ್ ಬಾಸ್’: ರಾಹುಲ್ ಗಾಂಧಿ
ಹೊಸದಿಲ್ಲಿ, ಮಾ.26: ನರೇಂದ್ರ ಮೋದಿ ಆ್ಯಪ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿಯವರು ಭಾರತೀಯರ ಮೇಲೆ ಬೇಹುಗಾರಿಕೆ ನಡೆಸುವ ಬಿಗ್ ಬಾಸ್ ಎಂದಿದ್ದಾರೆ,
ನಮೋ ಆ್ಯಪ್ ಬಳಕೆದಾರರ ಲೊಕೇಶನ್, ಆಡಿಯೋ, ವಿಡಿಯೋ, ಕಾಂಟಾಕ್ಟ್ ಮಾಹಿತಿಗಳನ್ನು ಹಾಗು ಇತರ ವೈಯಕ್ತಿಕ ಮಾಹಿತಿಗಳನ್ನು ರಹಸ್ಯವಾಗಿ ಕಲೆ ಹಾಕುತ್ತದೆ ಎಂದವರು ಟ್ವೀಟ್ ಒಂದರಲ್ಲಿ ಆರೋಪಿಸಿದ್ದಾರೆ.
ಇಷ್ಟೇ ಅಲ್ಲದೆ ಮೋದಿ ಈ ಆ್ಯಪ್ ಡೌನ್ ಲೋಡ್ ಮಾಡುವಂತೆ 13 ಲಕ್ಷ ಎನ್ ಸಿಸಿ ಕೇಡೆಟ್ ಗಳನ್ನು ಬಲವಂತಪಡಿಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ನಮೋ ಆ್ಯಪ್ ಬಳಕೆದಾರರ ಮಾಹಿತಿಗಳು ಅಮೆರಿಕದ ಕಂಪೆನಿಗಳಿಗೆ ಸೋರಿಕೆಯಾಗುತ್ತಿದೆ ಎಂದು ನಿನ್ನೆ ರಾಹುಲ್ ಗಾಂಧಿ ಆರೋಪಿಸಿದ್ದರು. “ಹಾಯ್! ನನ್ನ ಹೆಸರು ನರೇಂದ್ರ ಮೋದಿ. ನಾನು ಭಾರತದ ಪ್ರಧಾನಿ. ನೀವು ನನ್ನ ಆ್ಯಪ್ ಗೆ ಸೈನ್ ಅಪ್ ಆದರೆ ನಾನು ನಿಮ್ಮ ಎಲ್ಲಾ ಮಾಹಿತಿಗಳನ್ನು ನನ್ನ ಗೆಳೆಯರಾದ ಅಮೆರಿಕನ್ ಕಂಪೆನಿಗಳಿಗೆ ನೀಡುತ್ತೇನೆ” ಎಂದು ರಾಹುಲ್ ಟ್ವೀಟ್ ಮಾಡಿದ್ದರು.