ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ: ಆಟೊರಿಕ್ಷಾದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
Courtesy: ANI
ಚತ್ತೀಸ್ ಗಢ, ಎ,2: ವೈದ್ಯರು ಲಭಿಸಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರು ಆಟೊರಿಕ್ಷಾದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಚತ್ತೀಸ್ ಗಢದ ಕೊರಿಯಾ ಎಂಬಲ್ಲಿ ನಡೆದಿದೆ.
ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ ಮಹಿಳೆಯನ್ನು ಕೊರಿಯಾದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆದರೆ ಅಲ್ಲಿ ವೈದ್ಯರೇ ಇರಲಿಲ್ಲ. ಬೇರೆ ದಾರಿ ಕಾಣದೆ ಕುಟುಂಬದ ಸದಸ್ಯರು ತಾವೇ ಮಹಿಳೆಗೆ ಹೆರಿಗೆ ಮಾಡಿಸುವುದಾಗಿ ನಿರ್ಧರಿಸಿದರು.
ಈ ಸಂದರ್ಭ ಮಹಿಳೆ ಆಟೊರಿಕ್ಷಾದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಗರ್ಭಧಾರಣೆ ಅಥವಾ ಹೆರಿಗೆಯ ಸಂದರ್ಭ ಭಾರತದಲ್ಲಿ ಪ್ರತಿ ಗಂಟೆಗೆ ಐದು ಮಹಿಳೆ ಸಾವನ್ನಪ್ಪುತ್ತಾರೆ ಎಂದು ಡಬ್ಯುಎಚ್ ಒ ವರದಿ ತಿಳಿಸಿದೆ.
Next Story