ಸುಸ್ಥಿತಿಗೆ ಮರಳಿದ ರಕ್ಷಣಾ,ಗೃಹ ಮತ್ತು ಇತರ ಸಚಿವಾಲಯಗಳ ವೆಬ್ ಸೈಟ್ ಗಳು
ಹೊಸದಿಲ್ಲಿ,ಎ.7: ಶುಕ್ರವಾರ ಸಂಜೆ ಸ್ಥಗಿತಗೊಂಡಿದ್ದ ರಕ್ಷಣಾ ಮತ್ತು ಇತರ ಸಚಿವಾಲಯಗಳ ಜಾಲತಾಣಗಳು ಸುಸ್ಥಿತಿಗೆ ಮರಳಿದ್ದು,ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಸರಕಾರವು ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ತನ್ನ ಡಾಟಾ ಸೆಂಟರ್ನಲ್ಲಿಯ ಜಾಲತಾಣಗಳನ್ನು ಹ್ಯಾಕ್ ಮಾಡಲಾಗಿಲ್ಲ ಮತ್ತು ಯಾವುದೇ ರೂಪದ ಸೈಬರ್ ದಾಳಿ ನಡೆದಿಲ್ಲ ಎಂದು ಎನ್ಐಸಿ ಶುಕ್ರವಾರ ರಾತ್ರಿ ತಿಳಿಸಿತ್ತು.
ಈ ಜಾಲತಾಣಗಳಲ್ಲಿ ಚೀನಿ ಅಕ್ಷರವೊಂದು ಕಾಣಿಸಿಕೊಂಡಿತ್ತು ಮತ್ತುಹೀಗಾಗಿ ಅವುಗಳನ್ನುಹ್ಯಾಕ್ ಮಾಡಲಾಗಿದೆ ಎಂಬ ತಪ್ಪುಗ್ರಹಿಕೆಯುಂಟಾಗಿತ್ತು. ಆದರೆ ಈ ಜಾಲತಾಣಗಳನ್ನು ಹ್ಯಾಕ್ ಮಾಡಲಾಗಿಲ್ಲ. ರಕ್ಷಣಾ,ಗೃಹ ಮತ್ತು ಕಾರ್ಮಿಕ ಸಚಿವಾಲಯಗಳು,ಸಾರ್ವಜನಿಕ ಉದ್ಯಮಗಳ ಇಲಾಖೆ,ಚುನಾವಣಾ ಆಯೋಗ,ಭವಿಷ್ಯನಿಧಿ ಸಂಸ್ಥೆ,ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗಳ ಜಾಲತಾಣಗಳನ್ನು ಮರುಸ್ಥಾಪಿಸಲಾಗಿದ್ದು, ಸುಗಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಹೇಳಿಕೆ ತಿಳಿಸಿತ್ತು.
Next Story