ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಮೂರ್ತಿಗಳ ಸುದೀರ್ಘ ಸಭೆ !
ಹೊಸದಿಲ್ಲಿ, ಎ.23: ಸುಪ್ರೀಂ ಕೋರ್ಟ್ ನಲ್ಲಿ ಪ್ರತಿದಿನ ನ್ಯಾಯಪೀಠಗಳಿಗೆ ಪ್ರಕರಣಗಳ ಹಂಚಿಕೆಗೆ ಸಂಬಂಧಿಸಿ ನ್ಯಾಯಮೂರ್ತಿ ಗಳ ಸಭೆ ಕಲಾಪ ಆರಂಭಕ್ಕೂ ಮುನ್ನ ಇರುತ್ತದೆ. ಆದರೆ ಅದು 5 ನಿಮಿಷಗಳಲ್ಲೇ ಮುಗಿಯುತ್ತದೆ.ಸೋಮವಾರ 20 ನಿಮಿಷಗಳ ನ್ಯಾಯಮೂರ್ತಿಗಳ ಸಭೆ ನಡೆಯಿತು.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಪದಚ್ಯುತಿ ಪ್ರಸ್ತಾವನೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಗಳ ಸಭೆ 20 ನಿಮಿಷಗಳ ಕಾಲ ನಡೆಯಿತು. ಈ ಕಾರಣದಿಂದಾಗಿ ಕಲಾಪ ತಡವಾಗಿ ಆರಂಭಗೊಂಡಿತು ಎಂದು ತಿಳಿದು ಬಂದಿದೆ.
Next Story