ಶಶಿ ತರೂರ್ ರನ್ನು ಹಿಂದಿಕ್ಕಿದ ರಾಹುಲ್ ಗಾಂಧಿ!
ಹೊಸದಿಲ್ಲಿ, ಎ.29: ಜನಪ್ರಿಯ ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಅತ್ಯಧಿಕ ಅನುಯಾಯಿಗಳನ್ನು ಹೊಂದಿದ ಕಾಂಗ್ರೆಸ್ ಮುಖಂಡ ಎಂಬ ಹೆಗ್ಗಳಿಕೆಗೆ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಪಾತ್ರರಾಗಿದ್ದಾರೆ. ಈ ನಿಟ್ಟಿನಲ್ಲಿ ಅವರು ಹಿರಿಯ ಮುಖಂಡ ಶಶಿ ತರೂರ್ ಅವರ ದಾಖಲೆ ಮುರಿದಿದ್ದಾರೆ.
ರಾಹುಲ್ ಗಾಂಧಿ ಇದೀಗ 67.7 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಪಕ್ಷದ ಸಂಸದ ಹಾಗೂ ಹಿರಿಯ ರಾಜತಾಂತ್ರಿಕ ತರೂರ್ ಒಟ್ಟು 67 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ. ಈ ಮೂಲಕ ಪಕ್ಷದೊಳಗಿನ ಸ್ಪರ್ಧೆಯನ್ನು ಹಿರಿಯ ಮುಖಂಡನ ವಿರುದ್ಧ ನೂತನ ಅಧ್ಯಕ್ಷರು ಗೆದ್ದಂತಾಗಿದೆ. ಕೇರಳ ಸಂಸದನ ವಿರುದ್ಧದ ಈ ಅಂತರವನ್ನು ರಾಹುಲ್ ಮತ್ತಷ್ಟು ಹೆಚ್ಚಿಸಿಕೊಳ್ಳಲಿದ್ದಾರೆ ಎಂಬ ನಿರೀಕ್ಷೆ ಇದೆ.
ಪಕ್ಷದ ಅಧ್ಯಕ್ಷರಾಗಿದ್ದು, ಪಕ್ಷದ ಸಂಸದನಿಗಿಂತ ಕಡಿಮೆ ಅನುಯಾಯಿಗಳನ್ನು ಹೊಂದಿರುವುದು ರಾಹುಲ್ಗೆ ಮುಜುಗರದ ವಿಚಾರವಾಗಿತ್ತು ಎಂದು ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ತಟಸ್ಥ ವೀಕ್ಷಕರು ಹೇಳಿದ್ದಾರೆ.
Next Story