ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರ ದಾಳಿ; 16ಮಂದಿಗೆ ಗಾಯ
ಶ್ರೀನಗರ, ಜೂ.4: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗ್ರೇನೆಡ್ ದಾಳಿಗೆ ನಾಲ್ವರು ಪೊಲೀಸರು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ಉಗ್ರರು ಬಟಾಪೊರಾ ಚೌಕದಲ್ಲಿ ನಡೆಯುತ್ತಿದ್ದ ಪೊಲೀಸರ ಕಾರ್ಯಕ್ರಮವನ್ನು ಗುರಿಯಾಗಿರಿಸಿ ಗ್ರೇನೆಡ್ ದಾಳಿ ನಡೆಸಿದ್ದಾರೆ. ಆದರೆ ಅವರ ಗುರಿ ತಪ್ಪಿ ಗ್ರೇನೆಡ್ ರಸ್ತೆ ಬದಿಗೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ 9 ನಾಗರಿಕರು ಮತ್ತು ಮೂವರು ಪೊಲೀಸರು ಗಾಯಗೊಂಡರು ಎಂದು ತಿಳಿದು ಬಂದಿದೆ.
Next Story