ದೇಶದ ಮೊದಲ ಆಸ್ಪತ್ರೆ ರೈಲು ಮಹಾರಾಷ್ಟ್ರದ ಲಾತೂರುಗೆ
ಶ್ರೀನಗರ, ಜೂ. 6: ಲೈಫ್ಲೈನ್ ಎಕ್ಸ್ಪ್ರೆಸ್ ತಮ್ಮ ನಗರಕ್ಕೆ ಬರುತ್ತದೆ ಎಂದು ಮಹಾರಾಷ್ಟ್ರದ ಲಾತೂರು ಕುತೂಹಲದಿಂದ ಕಾಯುತ್ತಿದೆ. ಬಹು ದೂರ ಹಾಗೂ ದುರ್ಗಮ ಪ್ರದೇಶದಲ್ಲಿರುವ ರೋಗಿಗಳಿಗೆ ವೈದ್ಯಕೀಯ ನೆರವು ಹಾಗೂ ಪರಿಹಾರ ನೀಡುವ ಜಗತ್ತಿನ ಮೊದಲ ಆಸ್ಪತ್ರೆ-ರೈಲು ಎಂದು ಕರೆಯಲಾಗುತ್ತಿರುವ ರೈಲು ಮುಂದಿನ ವಾರ ಮಹಾರಾಷ್ಟ್ರಕ್ಕೆ ಆಗಮಿಸಲಿದೆ.
ಈ ರೈಲು ಲಾತೂರು ಜಿಲ್ಲೆಯಲ್ಲಿ ಜೂನ್ 15ರಿಂದ ಜುಲೈ 16ರ ವರೆಗೆ ನಿಲ್ಲಲಿದೆ. ಅನಂತರ ಉತ್ತರಪ್ರದೇಶದ ಮಿರ್ಜಾಪುರಕ್ಕೆ ತೆರಳಲಿದೆ. ಲೈಫ್ಲೈನ್ ಎಕ್ಸ್ಪ್ರೆಸ್ ಕಳೆದ ಮೂರು ದಶಕಗಳಿಂದ ಭಾರತದ ದುರ್ಗಮ ಪ್ರದೇಶಗಳಲ್ಲಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ ಒದಗಿಸುತ್ತಿದೆ. ಇದು ಒಂದು ದಶಲಕ್ಷಕ್ಕೂ ಅಧಿಕ ಜನರಿಗೆ ನೆರವು ನೀಡಿದೆ. ಈ ರೈಲು ಹೊಸ ಸ್ಥಳಕ್ಕೆ ಹೋಗುವ ಮೊದಲು 1 ತಿಂಗಳ ಕಾಲ ಒಂದು ಜಿಲ್ಲೆಯಲ್ಲಿ ನಿಲ್ಲಲಿದೆ. ದೇಶದಲ್ಲಿ ಆರೋಗ್ಯ ಸೇವೆಯ ಕೊರತೆಯಿಂದ ತೊಂದರೆ ಅನುಭವಿಸುತ್ತಿರುವ ಸಾವಿರಾರು ಜನರಿಗೆ ಈ ರೈಲಿನಿಂದ ಸಾಕಷ್ಟು ನೆರವು ದೊರೆತಿದೆ.
Next Story