2,400ಕ್ಕೂ ಅಧಿಕ ಐಎಎಸ್, ಐಪಿಎಸ್ ಹುದ್ದೆ ಖಾಲಿ: ಕೇಂದ್ರ
ಹೊಸದಿಲ್ಲಿ, ಜು. 19: ದೇಶದಲ್ಲಿ ಸುಮಾರು 2,400 ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಹುದ್ದೆಗಳು ಖಾಲಿ ಬಿದ್ದಿವೆ ಎಂದು ಕೇಂದ್ರ ಸರಕಾರ ಹೇಳಿದೆ. ಐಎಎಸ್ನ 6,553 ಹುದ್ದೆಗಳಲ್ಲಿ 1,449 ಹುದ್ದೆಗಳು ಅಥವಾ ಶೇ. 22.11 ಹುದ್ದೆಗಳು ಖಾಲಿ ಬಿದ್ದಿವೆ. ಐಪಿಎಸ್ನ 4,940 ಹುದ್ದೆಗಳಲ್ಲಿ 970 ಅಥವಾ ಶೇ. 19.64 ಹುದ್ದೆಗಳು ಖಾಲಿ ಬಿದ್ದಿವೆ ಎಂದು ಜಿತೇಂದ್ರ ಸಿಂಗ್ ಲಿಖಿತ ಹೇಳಿಕೆ ಮೂಲಕ ರಾಜ್ಯ ಸಭೆಗೆ ತಿಳಿಸಿದರು.
Next Story