ತಮಿಳುನಾಡಿನ ಸೇಲಂನಲ್ಲಿ ಭೂಕಂಪನ
ಸೇಲಂ, ಜು.22: ತಮಿಳುನಾಡಿನ ಸೇಲಂ ಜಿಲ್ಲೆಯ ಹಲವೆಡೆ ರವಿವಾರ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 3.3ರಷ್ಟು ಭೂಕಂಪನದ ತೀವ್ರತೆ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆಟ್ಟೂರು, ಒಮಲ್ಪುರ್ ಹಾಗು ತರಾಮನಲಂನಲ್ಲಿ 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿತ್ತು ಎನ್ನಲಾಗಿದೆ. ಹೆದರಿದ ಜನರು ಮನೆಯಿಂದ ಹೊರಗೆ ಬಂದಿದ್ದರು.
ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಜಿಲ್ಲಾಧಿಕಾರಿ ರೋಹಿಣಿ ಆರ್. ತಿಳಿಸಿದ್ದಾರೆ.
Next Story