ಬಿಜೆಪಿ ಕಾರ್ಯಕರ್ತ, ಚಾಲಕನಿಂದ ಮಹಿಳೆಯ ಅತ್ಯಾಚಾರ: ಆರೋಪ
ಮೀರತ್, ಜು.30: ಬಿಜೆಪಿ ಕಾರ್ಯಕರ್ತ ಹಾಗು ಆತನ ಕಾರು ಚಾಲಕ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಬಿಜೆಪಿ ಕಾರ್ಯಕರ್ತನನ್ನು ವಿಕ್ಕಿ ತನೇಜಾ ಹಾಗು ಆತನ ಚಾಲಕನನ್ನು ಜೈಬ್ ಎಂದು ಗುರುತಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಘಟನೆ ನಡೆದಿತ್ತು ಎಂದವರು ಆರೋಪಿಸಿದ್ದರು. ಇಷ್ಟೇ ಅಲ್ಲದೆ ಬಲವಂತವಾಗಿ ತನಗೆ ಚಾಲಕನೊಂದಿಗೆ ಮದುವೆ ಮಾಡಲಾಗಿತ್ತು. ಆದರೆ 6 ತಿಂಗಳ ನಂತರ ಆತ ತೊರೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.
“ನಾನು ಈ ಬಗ್ಗೆ ದೂರು ನೀಡಿದಾಗ ನನ್ನನ್ನು ಬಲವಂತದಿಂದ ಮದುವೆಯಾದರು. ನನ್ನನ್ನು ಬೆದರಿಸಲಾಗುತ್ತಿದೆ” ಎಂದು ಮಹಿಳೆ ಆರೋಪಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
Next Story