ಪ್ಲಾಸ್ಟಿಕ್ ಬ್ಯಾಗ್ ನಲ್ಲಿ 14 ನವಜಾತ ಶಿಶುಗಳ ಮೃತದೇಹ ಪತ್ತೆ
ಕೊಲ್ಕತ್ತಾ, ಸೆ.2: ಸ್ವಚ್ಛತಾ ಕಾರ್ಯಕ್ರಮವೊಂದರ ವೇಳೆ 14 ನವಜಾತ ಶಿಶುಗಳ ಮೃತದೇಹ ಖಾಲಿ ಸ್ಥಳವೊಂದರಲ್ಲಿ ಪತ್ತೆಯಾಗಿರುವ ಘಟನೆ ದಕ್ಷಿಣ ಕೊಲ್ಕತ್ತಾದ ಹರಿದೇಬ್ ಪುರ್ ನಲ್ಲಿ ನಡೆದಿದೆ.
ಕಾರ್ಮಿಕರು ಇಲ್ಲಿನ ಹುಲ್ಲಿಗಾವಲು ಪ್ರದೇಶದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದಾಗ ಪ್ಲಾಸ್ಟಿಕ್ ಬ್ಯಾಗ್ ಗಳಲ್ಲಿ ಸುತ್ತಿರುವ ಮೃತದೇಹಗಳು ಪತ್ತೆಯಾಗಿತ್ತು.
“ಗರ್ಭಪಾತದ ಜಾಲವೊಂದು ಇಲ್ಲಿ ನಡೆಯುತ್ತಿದೆ ಎಂದು ಶಂಕಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಲವು ಶಿಶುಗಳ ಮೃತದೇಹ ಭಾಗಶಃ ಕೊಳೆತಿದ್ದರೆ, ಇನ್ನೂ ಕೆಲವು ಸಂಪೂರ್ಣವಾಗಿ ಕೊಳೆತಿವೆ ಎನ್ನಲಾಗಿದೆ.
Next Story