ಮತ್ತೆ ಬೆಲೆಯೇರಿಕೆ: ಪೆಟ್ರೋಲ್ ಲೀಟರ್ ಗೆ 86.25 ರೂ. !
ಮುಂಬೈ, ಸೆ.3: ಪೆಟ್ರೋಲ್ ದರ ಮುಂಬೈಯಲ್ಲಿ ಲೀಟರ್ ಗೆ ದಾಖಲೆ ರೂ 86.25ಗೆ ಏರಿದೆ. ಈ ಹಿಂದೆ ಮೇ 9ರಂದು ಮುಂಬೈಯಲ್ಲಿ ಪೆಟ್ರೋಲ್ ಬೆಲೆ ರೂ 86.24ಗೆ ಏರಿತ್ತು. ಯಾವುದೇ ಮೆಟ್ರೋ ನಗರದಲ್ಲಿ ಪೆಟ್ರೋಲ್ ಬೆಲೆ ಇಷ್ಟು ಏರಿಕೆಯಾಗಿಲ್ಲ.
ಡೀಸೆಲ್ ಬೆಲೆ ಕೂಡ ಲೀಟರ್ ಗೆ ದಾಖಲೆ ರೂ 75.12ಗೆ ಏರಿದ್ದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆಯೆನ್ನಲಾಗಿದೆ. ಸರಕಾರ ಇಂಧನದ ಮೇಲಿನ ಅಬಕಾರಿ ಸುಂಕ ಮತ್ತಿತರ ಸುಂಕಗಳನ್ನು ಇಳಿಸಬೇಕೆಂದು ಅಖಿಲ ಮಹಾರಾಷ್ಟ್ರ ಪೆಟ್ರೋಲ್ ವಿತರಕರ ಸಂಘದ ಪದಾಧಿಕಾರಿ ಉದಯ್ ಲೋಧ್ ಹೇಳುತ್ತಾರೆ.
ರವಿವಾರ ಮಹಾರಾಷ್ಟ್ರದ ನಂದೇಡ್ ನಗರದಲ್ಲಿ ಪೆಟ್ರೋಲ್ ಗೆ ಪ್ರತಿ ಲೀಟರ್ ಗೆ ರೂ 87.90ರಷ್ಟಿತ್ತು. ಕಳೆದ ಏಳು ತಿಂಗಳ ಅವಧಿಯಲ್ಲಿ ಲೀಟರ್ ಗೆ ರೂ 5ರಷ್ಟು ಏರಿಕೆಯಾಗಿರುವ ಪೆಟ್ರೋಲ್ ಬೆಲೆ ವಾಹನಿಗರ ಕಿಸೆಗೆ ಕತ್ತರಿ ಹಾಕುತ್ತಿದೆ. ಮಹಾರಾಷ್ಟ್ರದಲ್ಲಿ ಮುಖ್ಯವಾಗಿ ವ್ಯಾಟ್ ಹೆಚ್ಚಾಗಿದ್ದು. ಸರಕಾರ ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂದು ಸಾರಿಗೆ ಸಂಘಟನೆಗಳು ಆಗ್ರಹಿಸುತ್ತಿವೆ.
Next Story