ಜಮ್ಮುಕಾಶ್ಮೀರ: ಉಗ್ರರಿಂದ ಯೋಧನ ಹತ್ಯೆ
ಶ್ರೀನಗರ, ಸೆ. 17: ದಕ್ಷಿಣ ಕಾಶ್ಮೀರದ ಕಲ್ಗಾಂವ್ ಜಿಲ್ಲೆಯಲ್ಲಿ ಸೋಮವಾರ ಉಗ್ರರು ಯೋಧರೋರ್ವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಪ್ರಾದೇಶಿಕ ಸೇನೆಯ ಯೋಧ ಮುಖ್ತರ್ ಅಹ್ಮದ್ ಮಲ್ಲಿಕ್ ಅವರ ಶೂರತ್ ಕುಲ್ಗಾಂವ್ನಲ್ಲಿರುವ ಮನೆಗೆ ನುಗ್ಗಿದ ಉಗ್ರರು ವಿವೇಚನಾ ರಹಿತವಾಗಿ ಗುಂಡು ಹಾರಿಸಿದ್ದಾರೆ.
ಗುಂಡು ತಗುಲಿ ಗಂಭೀರ ಗಾಯಗೊಂಡ ಮಲ್ಲಿಕ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾದೇಶಿಕ ಸೇನೆ ಅವರನ್ನು ರಾಜ್ಯದ ಶ್ರೀನಗರದಲ್ಲಿ ನಿಯೋಜಿಸಲಾಗಿತ್ತು. ಘಟನೆ ನಡೆಯುವ ಸಂದರ್ಭ ಮಲ್ಲಿಕ್ ರಜೆಯಲ್ಲಿದ್ದರು.
Next Story