7 ವರ್ಷದ ಬಾಲಕಿಯ ಅತ್ಯಾಚಾರ
ಹೊಸದಿಲ್ಲಿ, ಸೆ.18: ಪಾರ್ಕ್ ಒಂದರಲ್ಲಿ 7 ವರ್ಷದ ಬಾಲಕಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ 21 ವರ್ಷದ ಯುವಕನೊಬ್ಬನನ್ನು ಬಂಧಿಸಲಾಗಿದೆ. ಇಲ್ಲಿನ ಶಹ್ದಾರಾದ ಸೀಮಾಪುರಿ ಎಂಬಲ್ಲಿ ಈ ಘಟನೆ ನಡೆದಿದೆ.
ನೆರೆಮನೆಯ ಯುವಕ ತನ್ನ ಪುತ್ರಿಯನ್ನು ಅತ್ಯಾಚಾರಗೈದಿದ್ದಾನೆ ಎಂದು ಬಾಲಕಿಯ ತಾಯಿ ಆರೋಪಿಸಿದ್ದರು. ರಾತ್ರಿ 10:30ರ ಸುಮಾರಿಗೆ ಬಾಲಕಿ ಮನೆ ಸಮೀಪ ಆಟವಾಡುತ್ತಿದ್ದಳು. ಈ ಸಂದರ್ಭ ಆರೋಪಿ ಆಕೆಯನ್ನು ಪೊದೆಗಳೆಡೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ;
Next Story