ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ಸ್ಗೆ ಬಿಜೆಪಿಯ ಭೋಪಾಲ್ ಸಮ್ಮೇಳನ
ಭೋಪಾಲ್,ಸೆ.26: ಮಧ್ಯ ಪ್ರದೇಶದ ಭೋಪಾಲ್ನಲ್ಲಿ ಬಿಜೆಪಿ ಮಂಗಳವಾರ ಆಯೋಜಿಸಿದ್ದ ಕಾರ್ಮಿಕರ ಬೃಹತ್ ಸಮ್ಮೇಳನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಬಿಜೆಪಿ ಆಯೋಜಿಸಿದ್ದ ಒಂದು ದಿನದ ಕಾರ್ಯಕರ್ತ ಮಹಾಕುಂಭ ಸಮ್ಮೇಳನವು ಯಾವುದೇ ರಾಜಕೀಯ ಪಕ್ಷದ ಅತ್ಯಂತ ದೊಡ್ಡ ಕೇಡರ್ ಆಧಾರಿತ ಸಮ್ಮೇಳನವಾಗಿದೆ ಎಂದು ಬ್ರಿಟನ್ ಮೂಲದ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ತಿಳಿಸಿರುವುದಾಗಿ ಬಿಜೆಪಿ ವಕ್ತಾರರು ಹೇಳಿಕೊಂಡಿದ್ದಾರೆ. ನಗರದ ಬೆಲ್ ಜಂಬೊರಿ ಮೈದಾನದಲ್ಲಿ ನಡೆದ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಜನರನ್ನುದ್ದೇಶಿಸಿ ಮಾತನಾಡಿದ್ದರು. ಇದಕ್ಕೆ ಕುರಿತಂತೆ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ರಾಕೇಶ್ ಸಿಂಗ್ಗೆ ಬ್ರಿಟನ್ ಸಂಸ್ಥೆ ಹಸ್ತಾಂತರಿಸಿದೆ. ಈ ಕಾರ್ಯಕ್ರಮದಲ್ಲಿ 10 ಲಕ್ಷ ಮಂದಿ ಭಾಗವಹಿಸಿದ್ದರು ಎಂದು ಪಕ್ಷದ ಮಾಧ್ಯಮ ವಿಭಾಗ ಉಸ್ತುವಾರಿ ಲೋಕೇಂದ್ರ ಪರಾಶರ್ ತಿಳಿಸಿದ್ದಾರೆ.
Next Story