ಪೊಲೀಸರ ಸೂಚನೆಯಂತೆ ಸಿಸಿಟಿವಿ ಕ್ಯಾಮರಾ ಆಫ್ ಮಾಡಲಾಗಿತ್ತು: ಅಪೋಲೋ ಆಸ್ಪತ್ರೆ
ಜಯಲಲಿತಾ ಸಾವು ಪ್ರಕರಣ
ಚೆನ್ನೈ, ಅ.6: ಪೊಲೀಸರ ಸೂಚನೆಯ ಮೇರೆಗೆ ಕಾರಿಡಾರುಗಳ ಸಿಸಿಟಿವಿ ಕ್ಯಾಮರಾಗಳನ್ನು ಆಫ್ ಮಾಡಲಾಗಿತ್ತು ಎಂದು ಜಯಲಲಿತಾ ಸಾವಿನ ತನಿಖೆ ನಡೆಸುತ್ತಿರುವ ಆಯೋಗಕ್ಕೆ ಅಪೋಲೋ ಆಸ್ಪತ್ರೆ ತಿಳಿಸಿದೆ.
ಆಸ್ಪತ್ರೆಯ ಚಿಕಿತ್ಸಾ ಕೊಠಡಿಯಲ್ಲ ಯಾವುದೇ ಸಿಸಿಟಿವಿ ಕ್ಯಾಮರಾಗಳಿರಲಿಲ್ಲ. ಕಾರಿಡಾರ್ ಗಳು ಮತ್ತು ಪ್ರವೇಶದಲ್ಲಿ ಭದ್ರತೆ ದೃಷ್ಟಿಯಿಂದ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು ಎಂದು ಆಸ್ಪತ್ರೆ ತಿಳಿಸಿದೆ.
ಸಿಸಿಟಿವಿ ಕ್ಯಾಮರಾ ಮತ್ತು ಆಸ್ಪತ್ರೆಯಿಂದ ನೀಡಲಾದ ಪತ್ರಿಕಾ ಪ್ರಕಟನೆ ಬಗೆಗಿನ ವಿಚಾರಣೆ ಹಿನ್ನೆಲೆಯಲ್ಲಿ ಈ ಮಾಹಿತಿಗಳಿರುವ ಅಫಿದಾವಿತನ್ನು ಆಯೋಗದ ಮುಂದೆ ಸಲ್ಲಿಸಲಾಗಿದೆ. ಪೊಲೀಸ್ ಅಧಿಕಾರಿ ಕೆ.ಎನ್. ಸತ್ಯಮೂರ್ತಿ ಹಾಗು ಇತರ ನಾಲ್ವರು ಪೊಲೀಸರು ಸಿಸಿಟಿವಿ ಕ್ಯಾಮರಾ ಆಫ್ ಮಾಡಲು ಹೇಳಿದ್ದರು ಎಂದು ಅಫಿದಾವಿತ್ ನಲ್ಲಿ ತಿಳಿಸಲಾಗಿದೆ.
Next Story