ಸ್ವಾಗತ ಕಾರ್ಯಕ್ರಮದಲ್ಲಿ ಆನೆ ಮೇಲಿಂದ ಬಿದ್ದ ಉಪ ಸ್ಪೀಕರ್ !
ಕರೀಂಗಂಜ್, ಅ.8: ಬಿಜೆಪಿ ಶಾಸಕ ಮತ್ತು ಅಸ್ಸಾಂ ವಿಧಾನಸಭೆಯ ನೂತನ ಉಪ ಸ್ಪೀಕರ್ ಕೃಪಾನಾಥ್ ಮಲ್ಲಾಹ್ ಬೆಂಬಲಿಗರು ಏರ್ಪಡಿಸಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಆನೆಯ ಮೇಲಿಂದ ಬಿದ್ದಿರುವ ಘಟನೆ ನಡೆದಿದೆ.
ರಟಾಬರಿಗೆ ಚೊಚ್ಚಲ ಭೇಟಿ ನೀಡಿದ ಸಂದರ್ಭ ಈ ಘಟನೆ ನಡೆದಿದೆ. ಘಟನೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ಉಪ ಸ್ಪೀಕರ್ ಆದ ನಂತರ ಮಲ್ಲಾಹ್ ತನ್ನ ಬೆಂಬಲಿಗರನ್ನು ಭೇಟಿಯಾಗಲು ಇಲ್ಲಿಗೆ ಆಗಮಿಸಿದ್ದರು. ಈ ಸಂದರ್ಭ ಬೆಂಬಲಿಗರು ಅವರನ್ನು ಆನೆಯ ಮೇಲೆ ಕುಳಿತುಕೊಳ್ಳುವಂತೆ ಹೇಳಿದ್ದರು. ಆದರೆ ಆನೆಯ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದೆ ಅವರು ಕೆಳಕ್ಕೆ ಬಿದ್ದಿದ್ದಾರೆ.
Next Story