ಮಹಿಳಾ ಪತ್ರಕರ್ತರು ಅಷ್ಟು ‘ಮುಗ್ಧ’ರಲ್ಲ ಎಂದ ಬಿಜೆಪಿ ನಾಯಕಿ
ಕೇಂದ್ರ ಸಚಿವ ಎಂ.ಜೆ. ಅಕ್ಬರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ
ಭೋಪಾಲ್, ಅ.13: ಕೇಂದ್ರ ಸಚಿವ ಎಂ.ಜೆ. ಅಕ್ಬರ್ ಅವರ ಮೇಲಿರುವ #ಮೀಟೂ ಕಳಂಕದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಬೇಕೆಂಬ ಆಗ್ರಹ ಎಲ್ಲೆಡೆ ಕೇಳಿ ಬರುತ್ತಿರುವಂತೆಯೇ ಮಧ್ಯ ಪ್ರದೇಶದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷ ಲತಾ ಕೇಲ್ಕರ್ ತಮ್ಮ ಹೇಳಿಕೆಯಿಂದ ಅಚ್ಚರಿ ಮೂಡಿಸಿದ್ದಾರೆ. “ಬೇರೆಯವರು ದುರುಪಯೋಗಪಡಿಸುವಷ್ಟು ಪತ್ರಕರ್ತೆಯರು ‘ಮುಗ್ಧರು’ ಎಂದು ನಾನಂದುಕೊಳ್ಳುವುದಿಲ್ಲ” ಎಂದು ಅವರು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡುತ್ತಾ ಹೇಳಿದ್ದಾರೆ.
ಅದೇ ಸಮಯ #ಮೀಟೂ ಆಂದೋಲನವನ್ನು ಸ್ವಾಗತಿಸಿದ ಬಿಜೆಪಿ ನಾಯಕಿ, ತಮ್ಮ ಮೇಲೆ ಎಸಗಲಾದ ಲೈಂಗಿಕ ದೌರ್ಜನ್ಯ,. ಕಿರುಕುಳವನ್ನು ಹೇಳಿಕೊಳ್ಳಲು ಇದು ಒಂದು ಅವಕಾಶ ಒದಗಿಸಿದೆ, ಅದು ಮಹಿಳೆಯರಿಗೆ ಶಕ್ತಿ ನೀಡಿದೆ' ಹೇಳಿದ್ದಾರೆ.
Next Story