ಅತ್ಯಾಚಾರ ಸಂತ್ರಸ್ತ ಬಾಲಕಿಗೆ ಪ್ರವೇಶ ನಿರಾಕರಿಸಿದ ಶಾಲೆ: ಆರೋಪ
ಡೆಹ್ರಾಡೂನ್, ಅ. 19: ಶಾಲೆಯ ಕ್ಯಾಂಪಸ್ನ ವಾತಾವರಣ ಹಾಳಾಗುತ್ತದೆ ಎಂಬ ನೆಪ ಒಡ್ಡಿ ಅತ್ಯಾಚಾರಕ್ಕೆ ಒಳಗಾದ ತಮ್ಮ ಪುತ್ರಿಗೆ ಪ್ರವೇಶ ನಿರಾಕರಿಸಿದ ನಗರದಲ್ಲಿರುವ ಶಾಲೆಯ ವಿರುದ್ದ ಹೆತ್ತವರು ಪೊಲೀಸ್ ದೂರು ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಹೆತ್ತವರು ಬಾಲಕಿಗೆ ಪ್ರವೇಶ ಪಡೆಯಲು ಎರಡು ಶಾಲೆಗಳನ್ನು ಸಂಪರ್ಕಿಸಿದ್ದಾರೆ. ಆದರೆ, ಪ್ರವೇಶ ನಿರಾಕರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ನಿವೇದಿತ ಕುಕ್ರೇಟಿ ತಿಳಿಸಿದ್ದಾರೆ.
ಬಾಲಕಿಯನ್ನು ದಾಖಲಿಸಿಕೊಂಡರೆ ಶಾಲೆಯ ವಾತಾವರಣ ಹಾಳಾದಿತು ಎಂದು ಒಂದು ಶಾಲೆ ಪ್ರವೇಶ ನಿರಾಕರಿಸಿದೆ ಎಂದು ಅವರು ತಿಳಿಸಿದ್ದಾರೆ.
‘‘ನಾವು ದೂರಿನ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಶಾಲೆ ಅಭಿಪ್ರಾಯದ ಬಗ್ಗೆ ಮಾಹಿತಿ ಪಡೆಯಲು ನನ್ಮ ತಂಡವನ್ನು ಶಾಲೆಗೆ ಕಳುಹಿಸಿ ಕೊಡಲಿದ್ದೇವೆ. ಈ ನಡುವೆ ಪ್ರಕರಣದ ಕುರಿತಂತೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುವುದು’’ ಎಂದು ಕುಕ್ರೇತಿ ತಿಳಿಸಿದ್ದಾರೆ.
Next Story