ರಸ್ತೆ ಬದಿಯಲ್ಲಿದ್ದ ಚೀಲದಲ್ಲಿ ಬಾಲಕಿಯ ಶವ ಪತ್ತೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಅ.28: ಯಮುನಾ ಜೀವವೈವಿಧ್ಯ ಉದ್ಯಾನದ ಸಮೀಪದ ರಸ್ತೆಯ ಬದಿಯಲ್ಲಿ ಎಸೆಯಲಾಗಿದ್ದ ಚೀಲದಲ್ಲಿ ಬಾಲಕಿಯ ಶವ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರಸ್ತೆ ಬದಿ ಚೀಲವೊಂದು ಬಿದ್ದಿರುವುದಾಗಿ ಬೆಳಿಗ್ಗೆ 7:30ರ ವೇಳೆ ಪಾದಚಾರಿಗಳಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಚೀಲದ ಕಟ್ಟು ಬಿಚ್ಚಿದಾಗ ಅದರೊಳಗಡೆ ಸುಮಾರು 8ರಿಂದ 9 ವರ್ಷದ ಬಾಲಕಿಯ ಶವ ಪತ್ತೆಯಾಗಿದ್ದು ಕುತ್ತಿಗೆಯಲ್ಲಿ ಉರುಳು ಬಿಗಿದ ಗುರುತು ಪತ್ತೆಯಾಗಿದೆ. ಮೃತದೇಹವನ್ನು ಅರುಣಾ ಅಸಫ್ ಆಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು ಮೃತ ಬಾಲಕಿಯ ವಿವರ ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story