3.4 ಕೋ.ರೂ.ವಿದೇಶಿ ಕರೆನ್ಸಿ ವಶ: ಅಫ್ಘಾನ್ ಪ್ರಜೆಯ ಸೆರೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ನ.11: 3.4 ಕೋ.ರೂ.ಮೌಲ್ಯದ ವಿದೇಶಿ ಕರೆನ್ಸಿಯನ್ನು ಕಳ್ಳಸಾಗಾಣಿಕೆ ಮಾಡಲು ಯತ್ನಿಸಿದ್ದ ಅಫ್ಘಾನ್ ಪ್ರಜೆಯೋರ್ವನನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಐಆರ್)ದ ಅಧಿಕಾರಿಗಳು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಉತ್ತರ ಕಾಬೂಲ್ನ ಪರ್ವಾನ್ ನಿವಾಸಿಯಾಗಿರುವ ಆರೋಪಿಯು ಶನಿವಾರ ದುಬೈಗೆ ತೆರಳುವ ವಿಮಾನವನ್ನು ಹತ್ತುವ ಮುನ್ನ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಆತ ಹಾರ್ಮೋನಿಯಮ್ನಲ್ಲಿ 4.5 ಲಕ್ಷ ಅಮೆರಿಕನ್ ಡಾಲರ್ಗಳನ್ನು ಬಚ್ಚಿಟ್ಟಿದ್ದು ಪತ್ತೆಯಾಗಿದ್ದು,ಅದನ್ನು ವಶಪಡಿಸಿಕೊಳ್ಳಲಾಗಿದೆ.
Next Story