ತೆಲಂಗಾಣ ವಿಧಾನಸಭೆ ಚುನಾವಣೆ: ಇ.ಸಿ. ಅಧಿಸೂಚನೆ
ಹೈದರಾಬಾದ್, ನ. 12: ತೆಲಂಗಾಣ ವಿಧಾನಸಭೆ ಚುನಾವಣೆ ಡಿಸೆಂಬರ್ 7ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಸೋಮವಾರ ಅಧಿಸೂಚನೆ ಹೊರಡಿಸಿದೆ. ಅಧಿಸೂಚನೆ ಪ್ರಕಾರ ನಾಮಪತ್ರವನ್ನು ನವೆಂಬರ್ 12ರಿಂದ 19ರ ವರಗೆ ಸ್ವೀಕರಿಸಲಾಗುವುದು. ಈ ನಾಮಪತ್ರಗಳ ಪರಿಶೀಲನೆ ನವೆಂಬರ್ 20ರಂದು ನಡೆಯಲಿದೆ. ನಾಮಪತ್ರ ಹಿಂದೆಗೆಯಲು ಕೊನೆ ದಿನಾಂಕ ನೆವಂಬರ್ 22 ಮತದಾನ ಡಿಸೆಂಬರ್ 7ರಂದು ನಡೆಯಲಿದೆ ಹಾಗೂ ಮತ ಎಣಿಕೆ ಡಿಸೆಂಬರ್ 11ರಂದು ನಡೆಯಲಿದೆ.
Next Story