ವರವರರಾವ್ ಮತ್ತೆ ಬಂಧನ
ಹೈದರಾಬಾದ್, ನ.17: ಹಲವು ವಾರಗಳ ಗೃಹಬಂಧನದ ಬಳಿಕ ಎಡಪಂಥೀಯ ಚಿಂತಕ ವರವರಾವ್ರನ್ನು ಶನಿವಾರ ಪುಣೆ ಪೊಲೀಸರು ಬಂಧಿಸಿ, ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಭೀಮಾಕೋರೆಗಾಂವ್ ಹಿಂಸಾಚಾರದ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಆಗಸ್ಟ್ನಲ್ಲಿ ವರವರರಾವ್ರನ್ನು ಗೃಹಬಂಧನದಲ್ಲಿರಿಸಲಾಗಿತ್ತು. ಇಂದು ಅವರನ್ನು ಹೈದರಾಬಾದ್ನ ಅವರ ನಿವಾಸದಿಂದ ಬಂಧಿಸಲಾಯಿತು.ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಲ್ಲಿ ಶಾಮೀಲಾದ ಹಾಗೂ ಮಾವೊವಾದಿಗಳ ಜೊತೆ ನಂಟು ಹೊಂದಿದ ಆರೋಪದಲ್ಲಿ ಬಂಧಿತರಾದ ಐವರು ಆರೋಪಿಗಳಲ್ಲಿ ವರವರರಾವ್ ಕೂಡಾ ಒಬ್ಬರಾಗಿದ್ದರು. ತನ್ನ ಟ್ರಾನ್ಸಿಟ್ ರಿಮಾಂಡ್ ವಿರುದ್ಧ ವರವರರಾವ್ ಸಲ್ಲಿಸಿದ ಅರ್ಜಿಯನ್ನು ಹೈದರಾಬಾದ್ ಹೈಕೋರ್ಟ್ ಶುಕ್ರವಾರ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪುಣೆ ಪೊಲೀಸರು ರಾವ್ರನು ್ನ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
Next Story